ಮಹಿಳೆಯ ಮನೆಗೆ ನುಗ್ಗಿ ಬ್ಲ್ಯಾಕ್‌ಮೇಲ್: ಚಿನ್ನಾಭರಣ, ₹55 ಸಾವಿರ ದೋಚಿದ ಐವರು ಬಂಧನ

ಕಾಸರಗೋಡು : ಮಹಿಳೆಯ ಮನೆಗೆ ಅಕ್ರಮವಾಗಿ ನುಗ್ಗಿ, ಆಕೆ ಮತ್ತು ಆಕೆಯ ಗಂಡುಸ್ನೇಹಿತನನ್ನು ಬೆದರಿಸಿ ಚಿನ್ನಾಭರಣ ಹಾಗೂ ಹಣ ದೋಚಿದ್ದ ಐವರು ಆರೋಪಿಗಳನ್ನು ವಿದ್ಯಾನ್‌ಗರ್ ಪೊಲೀಸರು ಬಂಧಿಸಿದ್ದಾರೆ.

​ಬಂಧಿತರನ್ನು ಬಿ. ಶರೀಫ್, ಮೊಹಮ್ಮದ್ ಸಾಲಿಹ್, ಉಮರ್ ಮುಖ್ತಾರ್, ಮೊಹಮ್ಮದ್ ಶಿಹಾನ್ ಮತ್ತು ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದೆ.

ಕಳೆದ ಜುಲೈ 21 ರಂದು ಈ ಘಟನೆ ನಡೆದಿದ್ದು, ಮನೆಗೆ ಬಂದಿದ್ದ ಗಂಡುಸ್ನೇಹಿತನ ಜೊತೆ ಮಹಿಳೆಯನ್ನು ಸೇರಿಸಿ ಫೋಟೋ ತೆಗೆದಿದ್ದ ಆರೋಪಿಗಳು, ಅದನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು. ನಂತರ ಮಹಿಳೆಯಿಂದ 2 ಪವನ್ ಚಿನ್ನದ ಸರ, ಉಂಗುರ, ರೂ.15,000 ನಗದು ಹಾಗೂ ಆಕೆಯ ಸ್ನೇಹಿತನಿಂದ ರೂ.40,000 ಕಿತ್ತುಕೊಂಡಿದ್ದರು.

​ಬಳಿಕವೂ ಹೆಚ್ಚುವರಿ ಹಣಕ್ಕೆ ಕಮಿಟು ಹಾಕಿ ನಿರಂತರ ಬೆದರಿಕೆ ಒಡ್ಡಿದಾಗ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ವಿದ್ಯಾನ್‌ಗರ್ ಇನ್ಸ್‌ಪೆಕ್ಟರ್ ಪಿ. ಪ್ರಮೋದ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯವು ಅವರಿಗೆ ರಿಮಾಂಡ್ ವಿಧಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!