ಕುಂಬಳೆ : ಕಾಸರಗೋಡಿನಿಂದ ಮಂಗಳೂರಿಗೆ ಹೊರಟಿದ್ದ ಪ್ರಿಯದರ್ಶಿನಿ ರಸ್ತೆ ಸಾರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪಿಗ್ಮಿ ಏಜೆಂಟ್ ಅವರ 20,000 ರೂಪಾಯಿ ಕಳವಾಗಿದೆ.

ಕಳತ್ತೂರು ನಿವಾಸಿ ರಾಘವ (49) ಎಂಬುವರು ಬ್ಯಾಂಕ್ನಲ್ಲಿ ಹಣ ಜಮಾ ಮಾಡಿ, ಬಳಿಕ ಪಡೆದಿದ್ದ 20 ರೂಪಾಯಿ ಮುಖಬೆಲೆಯ ನೋಟಿನ ಕಟ್ಟುಗಳನ್ನು ತಮ್ಮ ಬ್ಯಾಗ್ನಲ್ಲಿ ಇಟ್ಟುಕೊಂಡು ಕುಂಬಳೆಗೆ ಬಸ್ ಹತ್ತಿದ್ದರು.ಬಸ್ ಮೊಗ್ರಾಲ್ ತಲುಪಿದಾಗ ಬ್ಯಾಗ್ನ ಜಿಪ್ ತೆರೆದಿರುವುದು ಮತ್ತು ಹಣ ಮಿಸ್ ಆಗಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಬಸ್ ಅನ್ನು ಕುಂಬಳೆ ಪೊಲೀಸ್ ಠಾಣೆಗೆ ಒಯ್ದು, ಎಲ್ಲ ಪ್ರಯಾಣಿಕರನ್ನು ತಪಾಸಣೆ ನಡೆಸಿದರೂ ಹಣ ಪತ್ತೆಯಾಗಲಿಲ್ಲ. ಬಳಿಕ ಅರ್ಧ ಗಂಟೆಯ ನಂತರ ಬಸ್ ಪ್ರಯಾಣ ಮುಂದುವರಿಸಿದ್ದು, ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

