‘2026 ಫಿಫಾ ವರ್ಲ್ಡ್ ಕಪ್ ವಿತ್ ಕೇರಳ ಎಕ್ಸೈಸ್’ ಫುಟ್‌ಬಾಲ್ ಟೂರ್ನಮೆಂಟ್ ಸಮಾಪ್ತಿ

​ಕಾಸರಗೋಡು: ಕೆಎಸ್‌ಇಎಸ್‌ಎ ಮತ್ತು ಕೆಎಸ್‌ಇಒಎ ಕಾಸರಗೋಡು ಜಿಲ್ಲಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ, ಪಡನ್ನ ಸಿಎಪಿ ಟರ್ಫ್‌ನಲ್ಲಿ ಆಯೋಜಿಸಲಾಗಿದ್ದ “2026 ಫಿಫಾ ವರ್ಲ್ಡ್ ಕಪ್ ವಿತ್ ಕೇರಳ ಎಕ್ಸೈಸ್ – 7’s ಫುಟ್‌ಬಾಲ್ ಟೂರ್ನಮೆಂಟ್” ಯಶಸ್ವಿಯಾಗಿ ಸಂಪನ್ನಗೊಂಡಿತು.

​ತೃಕ್ಕರಿಪುರ ಶಾಸಕ ಶ್ರೀ ಸಂದೀಪ್ ವಾರಿಯರ್ ಟೂರ್ನಮೆಂಟ್ ಉದ್ಘಾಟಿಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ಫುಟ್‌ಬಾಲ್ ತಾರೆ ಮೊಹಮ್ಮದ್ ರಫಿ ಹಾಗೂ ಇತರ ಗಣ್ಯರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಫ್ರಾನ್ಸ್, ಪೋರ್ಚುಗಲ್, ಬ್ರೆಜಿಲ್ ಮತ್ತು ಅರ್ಜೆಂಟೀನಾ ತಂಡಗಳು ಭಾಗವಹಿಸಿದ್ದ ಈ ಟೂರ್ನಮೆಂಟ್‌ನಲ್ಲಿ, ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು, ಪೋರ್ಚುಗಲ್ ರನ್ನರ್-ಅಪ್ ಪ್ರಶಸ್ತಿ ಪಡೆಯಿತು.

ಸುರ್ಜಿತ್ (ಟಾಪ್ ಸ್ಕೋರರ್), ಅನೂಪ್ (ಗೋಲ್‌ಕೀಪರ್), ಸುರೇಶ್ ಪಿ. (ಡಿಫೆಂಡರ್) ಮತ್ತು ಅಖಿಲ್ (ಬೆಸ್ಟ್ ಪ್ಲೇಯರ್) ​ವೈಯಕ್ತಿಕ ಪ್ರಶಸ್ತಿಗಳನ್ನು
ಪಡೆದುಕೊಂಡರು.ಸಮಾರೋಪ ಸಮಾರಂಭದಲ್ಲಿ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಲೀಂಕುಮಾರ್ ದಾಸ್ ಮತ್ತು ಮಾನವ ಹಕ್ಕುಗಳ ವೇದಿಕೆಯ ಮುಸ್ತಕ್ ವಿಜೇತರಿಗೆ ಬಹುಮಾನ ವಿತರಿಸಿದರು. ಕ್ರೀಡಾಕೂಟವು ಸಿಬ್ಬಂದಿಗಳ ನಡುವೆ ಸೌಹಾರ್ದತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!