ಮಳೆಗಾಲದಲ್ಲಿ ಮಳೆಯ ಅಭಾವ ಬಿಸಿಲಿನ ಆರ್ಭಟ ಹೆಚ್ಚಾಗಿದ್ದು ಪರಿಸರ ಹಾಗೂ ತಪಮಾನ ದಲ್ಲಿ ಆಗುತ್ತಿರುವ ವ್ಯತ್ಯಾಸ, ಕೃಷಿಗೆ ನೀರಿನ ಅಭಾವ, ವಿದ್ಯುತ್ ಅಭಾವ ನಿಗಿಸಲು ಪರಿಸರ ರಕ್ಷಣೆ ಉದ್ದೇಶದಿಂದ ಮಳೆಗಾಗಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಸಂಕ್ರಮಣ ದಿನ ಸಾರ್ವಜನಿಕ ವಿಶೇಷ ಪ್ರಾಥನೆ ನೆರವೇರಿಸಲಾಯಿತು.

ಕ್ಷೇತ್ರದ ಅರ್ಚಕ ಶ್ರೀ ತಿರುಮಲೇಶ್ ಆಚಾರ್ಯ, ಗುರುಸ್ವಾಮಿ ಉದಯ ಪವಳ, ಕ್ಷೇತ್ರ ಪದಾಧಿಕಾರಿಗಳಾದ ಪದ್ಮನಾಭ ಕಡಪರ, ಆದರ್ಶ ಬಿ ಎಂ, ದೇವರಾಜ್, ಸುನಿಲ್ ಹೊಸಂಗಡಿ, ಅನುಪಮಾ, ಕೀರ್ತಿ ರಾಜ್, ನಂದ ಹೆಗ್ಡೆ ಹಾಗೂ ಭಕ್ತರು ಉಪಸ್ಥಿತರಿದ್ದರು



