272 .16 ಲೀಟರ್ ವಿದೇಶಿ ಮದ್ಯ ವಶ ಪಡಿಸಿದ ಅಬಕಾರಿ ಇಲಾಖೆ ಪರಾರಿಯಾದ ಆರೋಪಿಗಳು

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 272.16 ಲೀಟರ್ ಕರ್ನಾಟಕ ನಿರ್ಮಿತ ವಿದೇಶ ಮದ್ಯವನ್ನು ಕಾಸರಗೋಡು ಚೌಕಿ, ಸಿಪಿ.ಸಿ.ಆ‌ರ್.ಐ. ಪರಿಸರದಿಂದ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಕ್ಸೆಸ್ ಎನ್ಫೋರ್ಸ್ ಮೆಂಟ್ & ಆಂಟಿ ನರ್ಕೋಟಿಕ್ ಸ್ಪೆಶಲ್ ತಂಡ ಹಾಗೂ ಎಕ್ಸೆಸ್ ಸರ್ಕಲ್ ಆಫೀಸ್ ತಂಡದ ನೇತೃತ್ವದಲ್ಲಿ ಕುಂಬಳೆ ಆರಿಕ್ಕಾಡಿ ಬಳಿ ವಾಹನ ತಪಾಸಣೆ ನಡೆಸುವ ವೇಳೆ ಕಾರೊಂದು ನಿಲ್ಲಿಸದೆ ಪರಾರಿಯಾಗಿತ್ತು.

ಈ ಕಾರನ್ನು ಬೆನ್ನಟ್ಟಿ ಚೌಕಿ ಪರಿಸರದಿಂದ ಹಿಡಿದಾಗ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ವಶಪಡಿಸಲಾಗಿದೆ. ಕಾರಿನಲ್ಲಿದ್ದವರು ಓಡಿ ಪರಾರಿಯಾದರು. ಅಸಿಸ್ಟೆಂಟ್ ಎಕ್ಸೆಸ್ ಇನ್ಸೆಕ್ಟರ್ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಜಿತ್ ಕೆ.ಆ‌ರ್. ಸುಧೀಂದ್ರನ್ ಎಂ.ವಿ, ಮಂಜುನಾಥ ವಿ, ಅಥುಲ್ ಟಿ.ವಿ, ಸೋನು ಸೆಬಾಸ್ಟಿಯನ್, ಸಿಜಿನ್ ಸಿ, ರೀನ.ವಿ, ಸಮ್ಮನ್ ಕೆ.ಮೊದಲಾದವರು ಭಾಗವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!