ಕಾಸರಗೋಡು: ತಂದೆಯೊಂದಿಗೆ ಸ್ನಾನ ಮಾಡುತ್ತಿರುವ ಮಧ್ಯೆ ಹೊಳೆಗೆ ಬಿದ್ದ ಬಾಲಕ ಚಿಕಿತ್ಸೆ ಫಲಿಸದೆ ಸಾವು

ಕಾಸರಗೋಡು: ತಂದೆಯೊಂದಿಗೆ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮಧುವಾಹಿನಿ ಹೊಳೆಗೆ ಬಿದ್ದ 8 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಕಲ್ಲಕಟ್ಟ ಕಡಂಬಟ್ಟೆಯ ಕೆ.ಎ. ಮಶೂದ್ ಎಂಬುವರ ಪುತ್ರ ಅಬ್ದುಲ್ಲ ಸಾವನ್ನಪ್ಪಿದ ದುರ್ದೈವಿ ಬಾಲಕ.

​ರವಿವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಮಧುವಾಹಿನಿ ಹೊಳೆಯ ಕಡಂಬಟ್ಟ ಪ್ರದೇಶಕ್ಕೆ ತಂದೆ ಮತ್ತು ಮಗ ಸ್ನಾನ ಮಾಡಲು ಬಂದಿದ್ದರು. ಸ್ನಾನ ಮಾಡುತ್ತಿದ್ದಾಗ ಬಾಲಕ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ.

ತಕ್ಷಣವೇ ಸ್ಥಳೀಯರು ಹೊಳೆಗೆ ಇಳಿದು ಬಾಲಕನನ್ನು ರಕ್ಷಿಸಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಾಲಕ ಸೋಮವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾನೆ.

SHARE
Loading spinner

One thought on “ಕಾಸರಗೋಡು: ತಂದೆಯೊಂದಿಗೆ ಸ್ನಾನ ಮಾಡುತ್ತಿರುವ ಮಧ್ಯೆ ಹೊಳೆಗೆ ಬಿದ್ದ ಬಾಲಕ ಚಿಕಿತ್ಸೆ ಫಲಿಸದೆ ಸಾವು”

Leave a Reply

Your email address will not be published. Required fields are marked *

error: Content is protected !!