ಬದಿಯಡ್ಕ : ಗೊಲ್ಲ ಸಮಾಜ ಸಂಘ ಮಾನ್ಯದ ನೂತನ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮವು ಸಂಘದ ಸದಸ್ಯರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು. ಸಂಘದ ಅಧ್ಯಕ್ಷ ನವೀನ್ ಚಂದ್ರ ಮಾಸ್ತರ್ ದೀಪ ಬೆಳಗಿಸಿ ಕಾರ್ಯಾಲಯವನ್ನು ಉದ್ಘಾಟಿಸಿ, ಸಮಾಜದ ಅಭಿವೃದ್ಧಿಗೆ ಸಂಘದ ಕಾರ್ಯಾಲಯ ಕೇಂದ್ರಬಿಂದುವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಂಜುನಾಥ ಡಿ ಮಾನ್ಯ, ರಾಧಾಕೃಷ್ಣ ಎಂ.ಕೆ., ಮಣಿಕಂಠ ಮಾನ್ಯ, ಮುದ್ದುಕೃಷ್ಣ ಸಿ.ಎಚ್., ಸೀತಾರಾಮ ಎಂ., ಶ್ರೀನಿವಾಸ ಎಂ.ಎಚ್., ಈಶ್ವರ ಕೊಡಗಿ, ಕಿಶೋರ ಪುದುಕೋಳಿ, ಸುಧೀರ್ ಮೇಗಿನಡ್ಕ, ದಿನೇಶ್ ಕೊಡಗಿ, ದಿನೇಶ್ ಎಂ.ಕೆ., ಗಿರೀಶ್ ಗೊಲ್ಲ, ಮೋಹನ ಎಂ.ಜಿ., ಚಂದ್ರೇಶ್ ಮಾನ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಂಜುನಾಥ ಡಿ ಮಾನ್ಯ ಸ್ವಾಗತಿಸಿದರು. ದಿನೇಶ್ ಎಂ.ಕೆ. ವಂದಿಸಿದರು. ಕಾರ್ಯಕ್ರಮವು ಸಮಾಜದ ಸದಸ್ಯರ ಸಹಭಾಗಿತ್ವದೊಂದಿಗೆ ಯಶಸ್ವಿಯಾಗಿ ನಡೆಯಿತು.

