ಹೊಸಂಗಡಿಯ ಅಮ್ಮ ಲಾಟರಿ ಏಜೆನ್ಸಿಗೆ ಮತ್ತೆ ಕೋಟಿ ಅದೃಷ್ಟ

ಮಂಜೇಶ್ವರ: ಜುಲೈ 21ರಂದು ನಡೆದ ಸ್ತ್ರೀಶಕ್ತಿ ಲಾಟರಿಯ ಡ್ರಾದಲ್ಲಿ ಮೊದಲ ಬಹುಮಾನವಾದ ₹1 ಕೋಟಿ ಕಣ್ಣೂರು ಜಿಲ್ಲೆಯ ಪಯ್ಯನ್ ಲಾಟರಿ ಏಜೆನ್ಸಿ ಮೂಲಕ ಮಾರಾಟವಾದ ಟಿಕೆಟ್‌ಗೆ ದೊರೆತಿದೆ.SZ 204699 ಸಂಖ್ಯೆಯ ಟಿಕೆಟ್‌ಗೆ ಅದೃಷ್ಟ ಒಲಿದಿದೆ.

ಈ ಟಿಕೆಟ್ ನ್ನು ಪಯ್ಯನ್ ಲಾಟರಿಯ ಸಬ್ ಏಜೆಂಟ್ ಆಗಿರುವ ಹೊಸಂಗಡಿಯ ಅಮ್ಮ ಲಾಟರಿ ಏಜೆನ್ಸಿ ಮೂಲಕ ಮಾರಾಟ ಮಾಡಲಾಗಿತ್ತು. ಬಳಿಕ ಅದನ್ನು ಮಜೀರ್ಪಳ್ಳ ಅರಸು ಲಾಟರಿ ಮಾರಾಟಗಾರರಿಗೆ ಹಸ್ತಾಂತರಿಸಲಾಗಿದ್ದು, ಅಲ್ಲಿಂದಲೇ ಅದೃಷ್ಟಶಾಲಿಯ ಕೈ ಸೇರಿದೆ.2026ರ ಮೇ 19ರಂದು ನಡೆದ ಸ್ತ್ರೀಶಕ್ತಿ ಲಾಟರಿಯ ಮೊದಲ ಬಹುಮಾನವೂ ಪಯ್ಯನ್ ಲಾಟರಿ ಏಜೆನ್ಸಿ ಮೂಲಕ ಮಾರಾಟವಾದ ಟಿಕೆಟ್‌ಗೆ ಲಭಿಸಿತ್ತು.ಕಡಿಮೆ ಅವಧಿಯಲ್ಲೇ ಮತ್ತೊಮ್ಮೆ ಕೋಟಿ ರೂಪಾಯಿಯ ಅದೃಷ್ಟ ಪಯ್ಯನ್ ಲಾಟರಿಗೆ ಒಲಿದಿದೆ.

ಹೊಸಂಗಡಿಯ ಅಮ್ಮ ಲಾಟರಿ ಏಜೆನ್ಸಿ ಮೂಲಕ ಮಾರಾಟವಾದ ಟಿಕೆಟ್‌ಗಳಿಗೆ ಇದುವರೆಗೆ ನಾಲ್ಕು ಬಾರಿ ಮೊದಲ ಬಹುಮಾನ ಲಭಿಸಿದೆ ಎಂದು ಏಜೆಂಟ್ ಪ್ರವೀಣ್ ಕುಮಾರ್ ರಾಜು ತಿಳಿಸಿದ್ದಾರೆ.ಈ ಹಿಂದೆ ಕೂಡ ಇಲ್ಲಿಂದ ಟಿಕೆಟ್ ಖರೀದಿಸಿದ ಹಲವರಿಗೆ ಮೊದಲ ಬಹುಮಾನ ದೊರೆತಿದ್ದು, ಇದರೊಂದಿಗೆ ಅಮ್ಮ ಲಾಟರಿ ಏಜೆನ್ಸಿ ‘ಅದೃಷ್ಟದ ಕೇಂದ್ರ’ ಎಂಬ ಹೆಸರನ್ನೂ ಗಳಿಸಿದೆ.

ಮತ್ತೊಮ್ಮೆ ಕೋಟಿ ಬಹುಮಾನ ದೊರೆತಿರುವ ಹಿನ್ನೆಲೆಯಲ್ಲಿ ಅಮ್ಮ ಲಾಟರಿ ಏಜೆನ್ಸಿಯಲ್ಲಿ ಸಂತಸದ ವಾತಾವರಣ ನೆಲೆಸಿದ್ದು, ಅದೃಷ್ಟದ ಟಿಕೆಟ್ ಮಾರಾಟ ಮಾಡಿದ ವ್ಯಾಪಾರಿಯೂ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!