ಮಂಜೇಶ್ವರ : ಸಮಗ್ರ ಶಿಕ್ಷ ಕೇರಳ BRC ಮಂಜೇಶ್ವರ ನೇತ್ರತ್ವದಲ್ಲಿ ದಿನಾಂಕ 22.08.2026 ರಂದು ವಿಶೇಷ ಚೇತನ ಮಕ್ಕಳನ್ನು ಒಳಗೊಂಡು ಓಣಂ ಮತ್ತು ನಬಿದಿನಂ ಆಚರಣೆಯು ಬಹಳ ವಿಜ್ರಂಭಣೆಯಿಂದ ಉಪ್ಪಳ ಹಬ್ ನಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪ ಜಿಲ್ಲಾ ಶಿಕ್ಷಣ ಅಧಿಕಾರಿಯಾದ ಶ್ರೀಯುತ ನಾರಾಯಣ ಡಿ ಇವರು ವಹಿಸಿದ್ದರು.


ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಗೋಲ್ಡನ್ ಅಬ್ದುಲ್ ರೆಹಮಾನ್ ಉದ್ಗಾಟಿಸಿದರು.

ಮುಖ್ಯ ಅತಿಥಿಗಳಾದ ಶ್ರೀಯುತ ಸುಬೈರ್ L K ತಹಶೀಲ್ದಾರ್ ಮಂಜೇಶ್ವರ, Smt ಚರಿಸ್ಮಾ DPO SSK KASARAGOD, ಶ್ರೀಯುತ ಸಿದ್ದೀಕ್ ಅಸ್ಲಂ ಡಯಟ್ Faculty, ಶ್ರೀಯುತ ಜಾರ್ಜ್ ಕ್ರಾಸ್ತಾ ನಿವೃತ್ತ ಶಿಕ್ಷಣ ಅಧಿಕಾರಿ ಮಂಜೇಶ್ವರ, Smt ಚಿತ್ರಾವತಿ ಮುಖ್ಯೋಪಾಧ್ಯಾಯನಿ GLPS Mulinja, Smt ಜಯಂತಿ ಮುಖ್ಯೋಪಾಧ್ಯಾಯಿನಿ GHSS Mangalpady, ಇಸ್ಮಾಯಿಲ್ ಮುಖ್ಯೋಪಾಧ್ಯಾಯರು GBLPS ಮಂಗಲ್ಪಾಡಿ,Farook Dudimma Uppala HUB ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಗಮಿಸಿದ ಅತಿಥಿಗಳನ್ನು BRC ಮಂಜೇಶ್ವರದ BPC ಶ್ರೀಯುತ ರಾಜಗೋಪಾಲನ್ ಸ್ವಾಗತಿಸಿ, BRC ಮಂಜೇಶ್ವರ ಟ್ರೈನರ್ smt ಸುಮಯ್ಯಾ ವಂದಿಸಿದರು.

ಆಗಮಿಸಿದ ಮಕ್ಕಳಿಗೆ ಗಣ್ಯರು ನೆನಪಿನ ಕಾಣಿಕೆ ವಿತರಿಸಿದರು. ಕಾರ್ಯಕ್ರಮದಲ್ಲಿ BRC ಸಹೋದ್ಯೋಗಿ ಬಂಧುಗಳಿಂದ ತಿರುವಾದಿರ ಪ್ರದರ್ಶನ ನಡೆಯಿತು. ಕೇರಳ ರಾಜ್ಯ ಕಲಾಭವನ ಮಣಿ ಪುರಸ್ಕೃತ ಪ್ರವೀಣ್ ಪೂಂಗೋಡ್ ಮತ್ತು ಬಳಗದವರಿಂದ ಓಣಂ ಸಂಬಂಧಿತ ಹಾಡುಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು. ಮಕ್ಕಳಿಂದಲೂ ಕಲಾ ಪ್ರದರ್ಶನ ನಡೆಯಿತು. 50 ಕ್ಕಿಂತ ಹೆಚ್ಚು ಮಕ್ಕಳು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

