ಮಂಜೇಶ್ವರ: ಭಾರೀ ಮಳೆ: ಕುಸಿದುಬಿದ್ದ ಜಿಮ್ ಕಟ್ಟಡದ ಆವರಣ ಗೋಡೆ: ಕೂದಲೆಳೆತದ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಮಂಜೇಶ್ವರ: ಮಂಜೇಶ್ವರದ ಒಳಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ‘ಮೈ ಜಿಂ ಹೆಲ್ತ್ ಕ್ಲಬ್’ ಕಟ್ಟಡದ ಆವರಣ ಗೋಡೆಯು ಬುಧವಾರ ಸುರಿದ ಬಿರುಸಿನ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಈ ವೇಳೆ ಯಾವುದೇ ಜೀವಹಾನಿ ಸಂಭವಿಸಿಲ್ಲದಿದ್ದರೂ, ಸ್ಥಳದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.


​ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ವಾಹನ ಸವಾರರು ಈ ಜಿಮ್ ಕಟ್ಟಡದ ಸಮೀಪವಿರುವ ರಸ್ತೆಯ ಮೂಲಕ ಸಂಚರಿಸುತ್ತಾರೆ. ಗೋಡೆ ಕುಸಿದುಬಿದ್ದ ಸಂದರ್ಭದಲ್ಲಿ ಅದೃಷ್ಟವಶಾತ್ ಯಾರೂ ಆ ಮಾರ್ಗದಲ್ಲಿ ಸಂಚರಿಸುತ್ತಿರಲಿಲ್ಲ.

ಇದರಿಂದಾಗಿ ದೊಡ್ಡದೊಂದು ದುರಂತ ಕೂದಲೆಳೆತದ ಅಂತರದಲ್ಲಿ ತಪ್ಪಿದಂತಾಗಿದೆ.

ಮತ್ತಷ್ಟು ಕುಸಿಯುವ ಭೀತಿ ಕುಸಿದುಬಿದ್ದ ಗೋಡೆಯ ಬಾಕಿ ಉಳಿದ ಭಾಗವೂ ಸಹ ಸಂಪೂರ್ಣ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಿ ಧರೆಗುರುಳುವ ಸ್ಥಿತಿಯಲ್ಲಿದೆ. ಇದು ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.



ಅಪಾಯಕಾರಿ ಸ್ಥಿತಿಯಲ್ಲಿರುವ ಉಳಿದ ಗೋಡೆಯ ಭಾಗವನ್ನು ಕೂಡಲೇ ತೆರವುಗೊಳಿಸಬೇಕು ಹಾಗೂ
​ ಸಾರ್ವಜನಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಬಂಧಪಟ್ಟ ಇಲಾಖೆಯು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!