ಭಾರತೀಯ ಮಜ್ದೂರ್ ಸಂಘದ 72ನೇ ಸ್ಥಾಪನಾ ದಿನ: ಚೌಕಿ ಜಂಕ್ಷನ್‌ನಲ್ಲಿ ಧ್ವಜಾರೋಹಣ

ಭಾರತೀಯ ಮಜ್ದೂರ್ ಸಂಘದ(BMS) 72 ನೇ ವರ್ಷದ ಸ್ಥಾಪನಾ ದಿನದ ಅಂಗವಾಗಿ ಚೌಕಿ ಜಂಕ್ಷನಿನಲ್ಲಿ BMS ಚೌಕಿ ಯೂನಿಟ್ ಅಧ್ಯಕ್ಷ ಶ್ರೀ ದಯಾನಂದ ಚೌಕಿ ಕಡಪ್ಪರ ಧ್ವಜಾರೋಹಣಗೈದರು. BMS Chowki Unit ಪ್ರಧಾನ ಕಾರ್ಯದರ್ಶಿ ಶ್ರೀ ರಂಜಿತ್ ರಾಮ್ ನಗರ ಬೆದ್ರಡ್ಕ ಪ್ರಾಸ್ತಾವಿಕ ಭಾಷಣ ಮಾಡಿದರು. ಚೌಕಿ ಕೋ-ಓಪರೇಟಿವ್ ಬ್ಯಾಂಕ್ ಮೇನೇಜರ್ ಶ್ರೀ ದೀಪಕ್ ಕೂಡ್ಲು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ BMS ಜಿಲ್ಲಾ ಸಮಿತಿ ಉಪಾಧ್ಯಕ, BMS ಮೊಗ್ರಾಲ್ ಪುತ್ತೂರು ಪಂಚಾಯತ್ ಘಟಕದ ಅಧ್ಯಕ್ಷ, BMS ಚೌಕಿ ಯೂನಿಟ್ ಅಧ್ಯಕ್ಷ, ಚೌಕಿ ಆಟೋ ಚಾಲಕ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಯಾವುದೇ ಕಲ್ಮಶವಿಲ್ಲದೆ ಆತ್ಮಾರ್ತತೆಯಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ದಯಾನಂದ ಚೌಕಿ ಕಡಪ್ಪರ ಅವರನ್ನು ಚೌಕಿ ಯೂನಿಟ್ 2025-26 ವತಿಯಿಂದ ಶ್ರೀ ದೀಪಕ್ ಕೂಡ್ಲು ಅವರು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ನಂತರ ಸಾರ್ವಜನಿಕವಾಗಿ ಸಿಹಿತಿಂಡಿ ವಿತರಿಸಲಾಯಿತು

SHARE
Loading spinner

Leave a Reply

Your email address will not be published. Required fields are marked *

error: Content is protected !!