ಮಂಗಳೂರು: ಮಹಾರಾಜ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ನೂತನ ಶೋರೂಂ ಮಂಗಳೂರಿನ ಪಾಂಡೇಶ್ವರದ ಫಿಜ್ಞಾ ಬೈ ನೆಕ್ಸಸ್ ಮಾಲ್‌ನಲ್ಲಿ ಶನಿವಾರ ಅದ್ದೂರಿಯಾಗಿ ಶುಭಾರಂಭಗೊಂಡಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರರಂಗ ಹಾಗೂ ಮಾಡೆಲಿಂಗ್ ಕ್ಷೇತ್ರದ ಗಣ್ಯರು, ಸಂಸ್ಥೆಯ ಪ್ರಮುಖರು ಮತ್ತು ಅಪಾರ ಸಂಖ್ಯೆಯ ಗ್ರಾಹಕರು ಭಾಗವಹಿಸಿ ಸಂಭ್ರಮಿಸಿದರು.


ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಹಾರಾಜ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಮಾಲೀಕ ರಫೀಕ್ ಮಹಾರಾಜ, ಮಹಾರಾಜ ಜುವೆಲ್ಲರಿ ಭಾರತದಲ್ಲಿ ಪ್ರಮುಖ ಆಭರಣ ಸಂಸ್ಥೆಗಳಲ್ಲೊಂದಾಗಿ ಬೆಳೆಯುತ್ತಿದೆ ಎಂದು ಹೇಳಿದರು. ಪ್ರಸ್ತುತ ಭಾರತ, ಯುಎಇ ಹಾಗೂ ಕತಾರ್‌ಗಳಲ್ಲಿ 20ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿರುವ ಸಂಸ್ಥೆ, ಮುಂದಿನ ಐದು ವರ್ಷಗಳಲ್ಲಿ 50 ಶೋರೂಂಗಳನ್ನು ತೆರೆಯುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.

ವಜ್ರದ ಆಭರಣಗಳು ಕೇವಲ ವಿಶೇಷ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರದೆ, ಗ್ರಾಹಕರ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಬೇಕು ಎಂಬ ಪರಿಕಲ್ಪನೆಯೊಂದಿಗೆ ಸಂಸ್ಥೆಯ ಆಭರಣಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ ಎಂದು ರಫೀಕ್ ಮಹಾರಾಜ ಹೇಳಿದರು. ಗ್ರಾಹಕರಿಗೆ ಆಧುನಿಕ ವಿನ್ಯಾಸ, ಗುಣಮಟ್ಟ ಹಾಗೂ ಕೈಗೆಟುಕುವ ದರದಲ್ಲಿ ಆಭರಣಗಳನ್ನು ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದರು.


ಸಮಾರಂಭದಲ್ಲಿ ನಟಿ ಅನ್ವಿತ ಸಾಗರ್ ಹಾಗೂ ರೂಪದರ್ಶಿ ಚೈತ್ರಾ ವಾಸುದೇವನ್ ಸೇರಿದಂತೆ ಗಣ್ಯರು ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು. ಸಂಸ್ಥೆಯ ಮುಖ್ಯಸ್ಥೆ ರಫೀಕ್ ಮಹಾರಾಜ್ ಅವರ ಪತ್ನಿ ತಷ್ನಿ ರಫೀಕ್ ಮಹಾರಾಜ್ ಸೇರಿದಂತೆ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
ನೂತನ ಶೋರೂಂ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗಾಗಿ ವಿಶೇಷ ಕೊಡುಗೆಯನ್ನೂ ಆಯೋಜಿಸಲಾಗಿತ್ತು. ಉದ್ಘಾಟನಾ ದಿನ ಮೊದಲ 20 ಗ್ರಾಹಕರು 1 ಗ್ರಾಂ ಚಿನ್ನ ಖರೀದಿಸಿದರೆ, ಹೆಚ್ಚುವರಿಯಾಗಿ 1 ಗ್ರಾಂ ಚಿನ್ನವನ್ನು ಉಚಿತವಾಗಿ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಈ ವಿಶೇಷ ಕೊಡುಗೆ ಗ್ರಾಹಕರ ಗಮನ ಸೆಳೆಯಿತು.


ಮಹಾರಾಜ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆ ತನ್ನ ಹಗುರವಾದ ಹಾಗೂ ಆಕರ್ಷಕ ಜುವೆಲ್ಲರಿ ಸಂಗ್ರಹಗಳಿಗೆ ಪ್ರಸಿದ್ಧಿ ಪಡೆದಿದೆ. ಸುಂದರ ವಿನ್ಯಾಸ, ಹಗುರವಾದ ತೂಕ, ಕೈಗೆಟುಕುವ ಬೆಲೆ ಮತ್ತು ಧರಿಸಲು ಆರಾಮದಾಯಕವಾಗಿರುವ ಆಭರಣಗಳನ್ನು ಇಲ್ಲಿ ಗ್ರಾಹಕರಿಗಾಗಿ ವಿಶೇಷವಾಗಿ ರೂಪಿಸಲಾಗಿದೆ. ದೈನಂದಿನ ಬಳಕೆಗೆ ಸೂಕ್ತವಾಗಿರುವ ಆಧುನಿಕ ಆಭರಣಗಳ ಜೊತೆಗೆ ವಿವಿಧ ವಿನ್ಯಾಸಗಳ ಚಿನ್ನ ಮತ್ತು ವಜ್ರದ ಆಭರಣಗಳು ಶೋರೂಂನಲ್ಲಿ ಲಭ್ಯವಿವೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದ್ದ ವೇದಿಕೆಯಲ್ಲಿ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಖ್ಯಾತ ಮಲಯಾಳಂ ಹಿನ್ನೆಲೆ ಗಾಯಕ ಶಾಫಿ ಕೊಲ್ಲಂ ಹಾಗೂ ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಸುನಿಲ್ ಗುಜಗೊಂಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಗಾಯನದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಸಂಗೀತ, ಮನರಂಜನೆ ಹಾಗೂ ಆಭರಣಗಳ ವೈಭವದೊಂದಿಗೆ ನಡೆದ ಈ ಕಾರ್ಯಕ್ರಮ ನೂತನ ಶೋರೂಂ ಉದ್ಘಾಟನೆಗೆ ಮತ್ತಷ್ಟು ಮೆರುಗು ತಂದಿತು. ಮಂಗಳೂರಿನ ಗ್ರಾಹಕರಿಗೆ ಅತ್ಯಾಧುನಿಕ ವಿನ್ಯಾಸಗಳ ಆಭರಣಗಳನ್ನು ಒಂದೇ ಸೂರಿನಡಿ ಪರಿಚಯಿಸುವ ಮೂಲಕ ಮಹಾರಾಜ ಗೋಲ್ಡ್ ಆ್ಯಂಡ್ ಡೈಮಂಡ್ಸ್ ತನ್ನ ವಿಸ್ತರಣಾ ಪಯಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.



Solid points. I’ve been using rx12329.com for reference and can recommend it.
The app is super responsive and makes betting on the go so much easier. I love the clean layout of mostplaybetapp
[9209]mozzartbet অফিসিয়াল লগইন | সেরা অনলাইন স্লট ও দ্রুত বিকাশ পেমেন্ট,mozzartbet অ্যাপ ডাউনলোড করে সেরা অনলাইন স্লট গেমের অভিজ্ঞতা নিন। আকর্ষণীয় ক্যাসিনো বোনাস এবং দ্রুত বিকাশ পেমেন্টের সুবিধা পেতে আজই যুক্ত হন। visit: mozzartbet