ಹಾರಾಡಿ ರಸ್ತೆ ಕಾಮಗಾರಿ ಅವೈಜ್ಞಾನಿಕ: ಅರುಣ್ ಕುಮಾರ್ ಪುತ್ತಿಲ ಆರೋಪ

ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ಹಾರಾಡಿಯಲ್ಲಿ ರಸ್ತೆ ಕಾಂಕ್ರೀಟ್ ಮಾಡಲು ಒಂದು ತಿಂಗಳು ರಸ್ತೆ ಬಂದ್ ಮಾಡಿದರೂ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದಾರೆ ಎಂದು ಪುತ್ತಿಲ ಪರಿರವಾರ ಸೇವಾ ಟ್ರಸ್ಟ್ ನ ಸ್ಥಾಪಕ ಅರುಣ್‌ ಕುಮಾ‌ರ್ ಪುತ್ತಿಲ ಅವರು ಆರೋಪಿಸಿದ್ದಾರೆ. ಅವರು ಸಾರ್ವಜನಿಕರು ಈ ರಸ್ತೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಮನಗಂಡು ಜು.22 ರಂದು ಸಂಜೆ ಹಾರಾಡಿ ರಸ್ತೆಗೆ ಭೇಟಿ ನೀಡಿದರು.

ಸ್ಥಳೀಯರು ವಾಹನ ಸವಾರರ ಸಮಸ್ಯೆಗಳನ್ನು ಆಲಿಸಿದ ಅವರು ಸ್ಥಳದಿಂದಲೇ ಪೋನ್ ಮೂಲಕ ಇಲಾಖಾಧಿಕಾರಿಗಳು ಮತ್ತು ಗುತ್ತಿಗೆದಾರ ವಿಜಯಾನಂದ ಶೆಟ್ಟಿಯವರಲ್ಲಿ ಮಾತನಾಡಿ ನಾಳೆಯೇ ಕಾಂಕ್ರೀಟ್ ರಸ್ತೆ ಸೈಡ್ ಗೆ ಮಣ್ಣು ಹಾಕಿ ಅಪಾಯವನ್ನು ತಪ್ಪಿಸುವಂತೆ ಸೂಚಿಸಿ ಮಾಧ್ಯಮದ ಜೊತೆ ಮಾತನಾಡಿದರು. ಕಾಂಕ್ರೀಟ್ ರಸ್ತೆಯಾದ ಬಳಿಕ ಡ್ರೈನ್ ಮಾಡುವುದು, ಪಕ್ಕದಲ್ಲಿ ಕೇಬಲ್ ಹಾಕಲಿದೆ ಎಂದು ಮತ್ತೆ ಕಾಮಗಾರಿ ನಿದಾನಗೊಳಿಸುವುದು.

ಈ ರೀತಿಯ ಕೆಲವೊಂದು ಎಡವಟ್ಟಿನಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ಬಹಳಷ್ಟು ಸಮಸ್ಯೆ ಆಗಿದೆ. ಇಲಾಖೆಯ ಅಧಿಕಾರಿಗಳು, ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಸಂಪರ್ಕಿಸಿದ್ದೇವೆ. ಸಮಸ್ಯೆ ಬಗೆ ಹರಿಸುವಂತೆ ತಿಳಿಸಿದ್ದೇವೆ. ಮುಂದಿನ ದಿನ ಇಂಜಿನಿಯರ್ ಗಳು ಅವೈಜ್ಞಾನಿಕ ವ್ಯವಸ್ಥೆಯನ್ನು ಬಿಟ್ಟು ನಾಳೆಯಿಂದ ಕಾಂಕ್ರೀಟ್ ರಸ್ತೆಯ ಬದಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ರಾತ್ರಿಯೂ ಕಾಮಾಗಾರಿ ಮಾಡಿ ಶೀಘ್ರದಲ್ಲಿ ಮುಗಿಸುವುದಾಗಿ ತಿಳಿಸಿದ್ದಾರೆ ಎಂದವರು ತಿಳಿಸಿದರು. ಹಾರಾಡಿಯ ಕಾಮಗಾರಿ ನಿದಾನವಾಗುತ್ತಿರುವ ಕುರಿತು ಶಾಸಕರು ಗಮನ ಹರಿಸಬೇಕಾಗಿತ್ತು. ಶಾಸಕರು ಅವರ ಕೆಲಸವನ್ನು ಮಾಡಬೇಕಾಗಿತ್ತು. ಕಾಮಗಾರಿಗೆ ವೇಗಕ್ಕೆ ಇಂಜಿನಿಯರ್ ಗಳ ಮೂಲಕ ಮೊದಲೇ ಎಸ್ಟಿಮೇಟ್ ಮಾಡಬೇಕಾಗಿತ್ತು. ಶಾಸಕರು ಕಾಮಗಾರಿ ವೇಗಕ್ಕೆ ಒತ್ತಡ ಹಾಕಬೇಕಾಗಿತ್ತು ಎಂದರು. ಈ ಸಂದರ್ಭ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ನ ಅಧ್ಯಕ್ಷರು, ಪದಾಧಿಕಾರಿಗಳು ಜೊತೆಗಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!