CJP ಬಳಿಕ ಈಗ EJP ಟ್ರೆಂಡ್: ಇ-20 ಪೆಟ್ರೋಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಭಿಯಾನ

ಸಿಜೆಪಿ (CJP) ಹೋರಾಟದ ಯಶಸ್ಸಿನ ಬಳಿಕ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇಜೆಪಿ (EJP – E20 ಜನತಾ ಪಾರ್ಟಿ) ಎಂಬ ಹೊಸ ಅಭಿಯಾನ ಭಾರೀ ಗಮನ ಸೆಳೆಯುತ್ತಿದೆ. ದೇಶಾದ್ಯಂತ ಜಾರಿಯಲ್ಲಿರುವ ಇ-20 (E20) ಪೆಟ್ರೋಲ್ ಬಳಕೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ವಿರುದ್ಧ ಈ ಆನ್‌ಲೈನ್ ಅಭಿಯಾನ ಆರಂಭವಾಗಿದೆ.

ಇ-20 ಪೆಟ್ರೋಲ್ ವಿರೋಧಿ *E20 ಜನತಾ ಪಾರ್ಟಿಯ ಇನ್‌ಸ್ಟಾಗ್ರಾಂ ಪುಟದ ಅನುಯಾಯಿಗಳ ಸಂಖ್ಯೆ *4 ಲಕ್ಷ ದಾಟಿದೆ.

ಇದೇ ವೇಳೆ, ದೇಶಾದ್ಯಂತ ಇ-20 ಪೆಟ್ರೋಲ್ ಬಳಕೆಯಿಂದ ಉಂಟಾಗುತ್ತಿರುವ ಪ್ರಾಯೋಗಿಕ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಸಂಸತ್ತಿನ ನಿಯಮಿತ ಕಲಾಪವನ್ನು ಸ್ಥಗಿತಗೊಳಿಸಿ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ಸಂಸದ ಹೈಬಿ ಈಡನ್ ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ತುರ್ತು ಚರ್ಚೆಯ ನೋಟಿಸ್ ಸಲ್ಲಿಸಿದ್ದಾರೆ.

ಇನ್ನೊಂದೆಡೆ, ಆಮ್ ಆದ್ಮಿ ಪಾರ್ಟಿ (AAP) ಹಾಗೂ ದೆಹಲಿಯ ವಿವಿಧ ಟ್ಯಾಕ್ಸಿ ಸಂಘಟನೆಗಳು ಇ-20 ಪೆಟ್ರೋಲ್ ವಿರುದ್ಧ ಪ್ರತಿಭಟನೆಗಳನ್ನು ಆರಂಭಿಸಿವೆ. ಈ ವಿಷಯ ದೇಶದಾದ್ಯಂತ ಹೊಸ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!