ಉದ್ಯಾವರ ಮಾಡದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ: ಸಾವಿರಾರು ಜನರ ಭಾಗಿ

ಉದ್ಯಾವರ, ಜುಲೈ 30: ತೀಯಾ ಸಮಾಜ ಸಭಾಭವನ, ಉದ್ಯಾವರ ಮಾಡದಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ಫೂಟ್ ಪಲ್ಸ್ ಥೆರಪಿ ವತಿಯಿಂದ ಉಚಿತ ಆರೋಗ್ಯ ಜಾಗೃತಿ ಹಾಗೂ ಫೂಟ್ ಪಲ್ಸ್ ಥೆರಪಿ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಆರೋಗ್ಯದ ಮಹತ್ವ, ಜೀವನಶೈಲಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹಾಗೂ ಫೂಟ್ ಪಲ್ಸ್ ಥೆರಪಿಯ ಪ್ರಯೋಜನಗಳ ಕುರಿತು ಸವಿವರ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಂಭು ನಂಬೋದಾರಿ, ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಲ್ಚಪ್ಪಡ, ತಮ್ಮ ದೈವದ ಪಾತ್ರಿ ತಿಮಿರು ಬೆಲ್ಚಪ್ಪಡ, ತೀಯಾ ಸಮಾಜದ ಅಧ್ಯಕ್ಷ ನೀಲಯ್ಯ ಪುಮಣ್ಣು, ಹರೀಶ್ ಶೆಟ್ಟಿ ಮಾಡ, ಕಂಪನಿಯ ಮುಖ್ಯ ಪ್ರವರ್ತಕರಾದ ಡಾ. ಸೀತಾರಾಮ ಶೆಟ್ಟಿ, ಮಾಜಿ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರೀ ಹಾಗೂ ಸಮಾಜಸೇವಕ ವಾಮನ ಮಾಡ ಉಪಸ್ಥಿತರಿದ್ದರು.

ಸ್ವಾಗತ ಭಾಷಣ ಮಾಡಿದ ಹರೀಶ್ ಶೆಟ್ಟಿ ಮಾಡ ಅವರು, “ಜೀವನಕ್ಕೆ ಹಣ ಬೇಕು, ಆದರೆ ಹಣವೇ ಜೀವನವಾಗಬಾರದು. ಒತ್ತಡ ಮತ್ತು ವಿಷಾದರಹಿತ ಜೀವನಕ್ಕಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ” ಎಂದು ತಿಳಿಸಿದರು. ಇದೇ ವೇಳೆ ಉಚಿತ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಪ್ರಭಾಕರ ಹಾಗೂ ಅವರ ತಂಡವನ್ನು ಅಭಿನಂದಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಮತ್ತು ಸಾರ್ವಜನಿಕರಿಗೆ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮಾಹಿತಿಯೊಂದಿಗೆ ಫೂಟ್ ಥೆರಪಿಯ ಪ್ರಾತ್ಯಕ್ಷಿಕೆ ಮತ್ತು ಎಲ್ಲರು ಫೋಟ್ ಥೆರಪಿಯ ಸದುಪಯೋಗವನ್ನು ಪಡೆದುಕೊಂಡರು.
ಈ ಥೆರಪಿ 18 ರಂದು ಆರಂಭಗೊಂಡಿದ್ದು ಅಗೋಸ್ಟ್ 03 ರ ತನಕ ನಡೆಯಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!