ಮಂಜೇಶ್ವರ : ಕುಂಜತ್ತೂರಿನ ಅಂಡರ್ ಪಾಸ್ ಬಳಿ ನೂತನವಾಗಿ ಆರಂಭಗೊಂಡ ಅಯಾಶ್ ಕ್ಲಿನಿಕ್ ಹಾಗೂ ಲೇಬರೇಟರಿ ವತಿಯಿಂದ ಇದೇ ಬರುವ ಅಗಸ್ಟ್ 2 ರಂದು ಬಾನುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಸಾರ್ವಜನಿಕರಿಗಾಗಿ ಸಂಪೂರ್ಣ ಉಚಿತ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ಕನಚೂರು ಮೆಡಿಕಲ್ ಕಾಲೇಜಿನ ಅಸಿಸ್ಟಂಟ್ ಪ್ರೊಫೆಸರ್ ಹಾಗೂ ಆಯಾಶ್ ಕ್ಲಿನಿಕ್ ಮುಖ್ಯಸ್ಥೆ ಡಾ. ಸುಜೀನಾ ಕುಂಜತ್ತೂರು ಅಯಾಸ್ ಕ್ಲಿನಿಕ್ ನಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಉತ್ತಮ ಆರೋಗ್ಯ ಯಾರಿಗೂ ದೂರವಾಗಬಾರದು, ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ನಮ್ಮ ಗುರಿ ಎಂಬ ಮಹಾನ್ ಉದ್ಧೇಶದೊಂದಿಗೆ ಹಮ್ಮಿಕೊಂಡಿರುವ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಸಲಹೆ, ಮಧು ಮೇಹ, ರಕ್ತದೊತ್ತಡ ಸೇರಿದಂತೆ ಎಲ್ಲಾ ವಯಸ್ಸಿನವರಿಗೂ ಅನುಭವಿ ವೈದ್ಯರುಗಳಿಂದ ಸಲಹೆ ಹಾಗೂ ಮಾರ್ಗದರ್ಶನ ಲಭಿಸಲಿದೆ ಎಂದು ಅವರು ಮಾಹಿತಿ ನೀಡಿದರು.
ಶಿಬಿರದಲ್ಲಿ ಎಲ್ಲಾ ವಯಸ್ಸಿನವರಿಗೂ ಮುಕ್ತ ಪ್ರವೇಶವಿದ್ದು, ಶಿಬಿರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ವಿಶ್ವಾಸಾರ್ಹ ಪರೀಕ್ಷೆಗಳು ಮತ್ತು ತಕ್ಷಣದ ವರದಿ ಕೂಡಾ ಲಭ್ಯವಿರುವುದಾಗಿ ಹೇಳಿದ ಅವರು ಈ ಸದುಪಯೋಗವನ್ನು ಕುಂಜತ್ತೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಸಹುಪಯೋಗಪಡಿಸಿ ಕೊಳ್ಳುವಂತೆ ವಿನಂತಿಸಿ ಕೊಂಡಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಹಿರಿಯ ವೈದ್ಯ ಡಾಕ್ಟರ್ ಖಾದರ್, ಮ್ಯಾನೇಜಿಂಗ್ ಡೈರೆಕ್ಟರ್ ಸಯ್ಯದ್ ಶೂಕೂರು ಉಪಸ್ಥಿತರಿದ್ದರು.


