ಮಂಗಳೂರು ವಲಯದ 25ನೇ ವಾರ್ಷಿಕ ಸಭೆ ಯಶಸ್ವಿ; ಸದಸ್ಯರ ಮಕ್ಕಳಿಗೆ ಸನ್ಮಾನ

ಮಂಗಳೂರು ವಲಯದ 25ನೇ ವಾರ್ಷಿಕ ಸಭೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.), ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ, ಮಂಗಳೂರು ವಲಯದ 25ನೇ ವಾರ್ಷಿಕ ಸಭೆಯು ನಗರದ ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಮಿನಿ ಹಾಲ್‌ನಲ್ಲಿ ನಡೆಯಿತು.


ಸಭೆಯನ್ನು ಉದ್ಘಾಟಿಸಿ ಮಾತನಾಡಿದ SKPA ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ ನವೀನ್ ರೈ ಪಂಜಳ. ಸಂಘದ ಮಹತ್ವವನ್ನು ವಿವರಿಸಿ, ಸದಸ್ಯರಿಗಾಗಿ ಜಾರಿಗೊಳಿಸಿರುವ ಸಾಂತ್ವನ ಯೋಜನೆ (ವಿಮೆ) ಕುರಿತು ಮಾಹಿತಿ ನೀಡಿದರು. ಹಿರಿಯರು ನಿರ್ಮಿಸಿರುವ ನಂಬಿಕೆ ಹಾಗೂ ಸಂಘಟನೆಯ ಭದ್ರ ಬುನಾದಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಸದಸ್ಯರ ಮೇಲಿದೆ ಎಂದು ಕರೆ ನೀಡಿದರು.


2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಿ . ವಿದ್ಯಾ ನಿಧಿಗೆ ಧನ ಸಹಾಯ ನೀಡಿದ ವಲಯದ ಸದಸ್ಯರಾದ ಕರುಣಾಕರ ಕಾಣoಗಿ, ಪ್ರಭಾಕರ್ ಕುಲಾಲ್, ಪ್ರಶಾಂತ್ ಶೆಟ್ಟಿ, ನಿಖಿಲ್ ಡಿ ಸೋಜಾ, ನವೀನ್ ಬಂಗೇರ, ಶೈಲೇಶ್ ಕುಮಾರ್, ನವೀನ್ ತಾರೆತೋಟ, ಪದ್ಮನಾಭ ಫೋಟೋ ಕಿನ್ನಿಗೋಳಿ ಇವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ನವ ವಿವಾಹಿತರು, ನೂತನ ಸ್ಟುಡಿಯೋ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗೌರವಿಸಲಾಯಿತು. ಮುಂಬರುವ ಜಿಲ್ಲಾ ಕ್ರೀಡಾಕೂಟದ ಪೋಸ್ಟರ್ ಅನ್ನು ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ಪ್ರಕಾಶ್ ಶೇರಿಗಾರ್ ಮತ್ತು ಹರೀಶ್ ಕುಂದರ್, ವಲಯ ಕಾರ್ಯದರ್ಶಿಗಳಾದ ನಿತಿನ್ ಕುತ್ತಾರ್ ಮತ್ತು ಪ್ರಸಾದ್ ಕುಲಾಲ್ ಅವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಉಪಾಧ್ಯಕ್ಷ ದೇವರಾಜ್ ಶೆಟ್ಟಿ, ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ದಾಮೋದರ್ ಆಚಾರ್ಯ ಹಾಗೂ ವಿಠಲ್ ಚೌಟ, ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ಲೋಕೇಶ್ ಕುಮಾರ್ ಕೆ., ಗೌರವಾಧ್ಯಕ್ಷ ಮಧು ಮಂಗಳೂರು, ಉಪಾಧ್ಯಕ್ಷ ಶ್ರೀಕಾಂತ್ ತಿಲಕ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.


ಸಭೆಯ ಅಧ್ಯಕ್ಷತೆಯನ್ನು ಮಂಗಳೂರು ವಲಯದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಶಬರಿ ವಹಿಸಿದ್ದರು. ರಜತ ಸಂಭ್ರಮದ ಹೊಸ್ತಿಲಲ್ಲಿರುವ ಮಂಗಳೂರು ವಲಯವು ಮುಂದಿನ ಕಾರ್ಯಕ್ರಮಗಳನ್ನು ಇನ್ನಷ್ಟು ಅದ್ಧೂರಿಯಾಗಿ ಆಯೋಜಿಸಲು ಎಲ್ಲರ ಸಹಕಾರ ಅಗತ್ಯವೆಂದು ಅವರು ಮನವಿ ಮಾಡಿದರು.
ಗತ ಸಭೆಯ ವರದಿಯನ್ನು ಜೊತೆ ಕಾರ್ಯದರ್ಶಿ ಶೈಲೇಶ್ ಕುಮಾರ್ ಹಾಗೂ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ನವೀನ್ ಬಂಗೇರವರು, ಕೋಶಾಧಿಕಾರಿ ನಿಖಿಲ್ ಡಿಸೋಜ ಅವರು ವಾರ್ಷಿಕ ಆದಾಯ-ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದರು. ಛಾಯಾ ಕಾರ್ಯದರ್ಶಿ ಸ್ವೀಟನ್ ಪಿಂಟೋ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯೆ ಬಬಿತಾ ಕಾರ್ಯಕ್ರಮವನ್ನು ನಿರೂಪಿಸಿದರು.
ಸದಸ್ಯರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ 25ನೇ ವಾರ್ಷಿಕ ಸಭೆ ಯಶಸ್ವಿಯಾಗಿ ನೆರವೇರಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!