ಕಾಸರಗೋಡು, ಜು.31: ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಕನ್ನಡ ಭವನದ ರಜತ ಸಂಭ್ರಮ ಸಮಾರೋಪದ ಅಂಗವಾಗಿ ಆಯೋಜಿಸಲಾದ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ–2026’ ಕಾಸರಗೋಡಿನ ಕನ್ನಡ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ‘ಭರವಸೆಯ ಬೆಳಕು (Light of Hopes) Students Achievement Award–2026’ ಹಾಗೂ ಸಮಾಜಮುಖಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ‘ಭರವಸೆಯ ಶಿಕ್ಷಣ ರತ್ನ (Light of Hopes Teachers Achievement Award–2026)’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಪ್ರಶಸ್ತಿಗಳನ್ನು ಕನ್ನಡ ಭವನದ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷ ಡಾ. ರವೀಂದ್ರ ಜೆಪ್ಪು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಕನ್ನಡ ಭವನದ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್–ಸಂಧ್ಯಾರಾಣಿ ದಂಪತಿ, ಡಾ. ಬಾಲಕೃಷ್ಣ ಎಸ್. ಮದ್ದೋಡಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕೊತ್ವಾಲ್ ಪದ್ಮನಾಭ ಶೇರುಗಾರ್, ಸತ್ಯನಾರಾಯಣ ಹೂಡೆ, ರಾಜೇಶ್ ಕೋಟೆಕಣಿ, ಪ್ರಕಾಶ್ ಚಂದ್ರ ತೊಕ್ಕೊಟ್ಟು, ಉಮೇಶ್ ರಾವ್ ಕುಂಬ್ಳೆ, ಅರುಣ್ ಕುಮಾರ್ ಪುತ್ತೂರು, ಸುರೇಶ್ ಕೆಂಮಿಂಜೆ ಪುತ್ತೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
‘ಭರವಸೆಯ ಬೆಳಕು’ ವಿದ್ಯಾರ್ಥಿ ಪ್ರಶಸ್ತಿಗೆ ತ್ರಿಷಾ ಎ. ರಾವ್, ತೇಜಸ್ ಮುದ್ದೋಡಿ, ನಿನಾದ್ ರಾವ್, ವೈಷ್ಣವಿ ಸಿ.ಎಚ್., ಮಾನ್ಯ ನುಳ್ಳಿಪಾಡಿ, ವೈಭವಿ ಎ., ಮಾನ್ಯತಾ ಪ್ರಶಾಂತ್, ಸ್ವಸ್ತಿಕಾ ಎ. ಪಾರೆಕಟ್ಟೆ, ಜೈತ್ರಶ್ರೀ, ಅದಿತಿ ಬೇಕಲ್, ಶ್ರೇಯ ಜಿ.ಎಂ., ತನುಶ್ ಎಸ್. ರಾವ್, ವೈಭವ್ ಬೇಕಲ್, ಭೂಮಿಕಾ ಸಿ.ಎಚ್., ಪ್ರಣಮ್ಯ ಎನ್., ಧೃತಿ ಜಿ., ಅಭಯ್ ವಿ., ಶ್ರಿಯಾ, ಹರ್ಷಿತಾ ಕೆ., ತನುಶ್ರೀ ಎಸ್., ಶ್ರೇಯಸ್ ಬೈಂದೂರು, ಪ್ರಣವಿ ಬಿ.ಕೆ., ಭವಿಷ್ ಆರ್.ಪಿ., ಅರ್ಪಣ್ ಕೆ., ಸಾನ್ವಿ ರಾವ್, ಪೂಜಾ ಬೇಕಲ್, ಅನನ್ಯ, ಚಿನ್ಮಯ್ ರಾವ್, ಸಂಜನ ಆರ್. ರಾವ್, ಶ್ರೇಯ ಬೈಂದೂರು, ಹರ್ಷಿತ ಕೆ.ಎಲ್., ಶ್ರೀನಿಧಿ ಪಡೆ, ಪ್ರಜ್ಞಾ ರಾವ್ ಎಂ., ಲಾವಣ್ಯ ಬಿ.ಸಿ., ಕ್ಷಿತಿಜ್, ಸಾಕ್ಷಿ, ಯಶಸ್ವಿನಿ, ದೀಕ್ಷಾ, ನಮೃತ ಹಾಗೂ ಸಾತ್ವಿಕ್ ಎಸ್. ರಾವ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಜನರಾದರು.
‘ಭರವಸೆಯ ಶಿಕ್ಷಣ ರತ್ನ’ ಶಿಕ್ಷಕರ ಪ್ರಶಸ್ತಿಗೆ ಶೀತಲ್ ಎ., ಡಾ. ರೇಷ್ಮಾ ಎಂ.ವೈ., ವಿದ್ಯಾ ಪಿ., ಯಶೋಧ ಪಿ., ನವ್ಯ, ಹರ್ಷಿತಾ ಕೆ., ರೇಖಾ ಸಿ.ಎಚ್., ನಯನ ಕೊಡಿಯಾಲ್ಬೈಲ್, ಮಲ್ಲಿಕಾ ರಾವ್, ಪ್ರೊ. ಐಶ್ವರ್ಯ, ಶುಭ ಕೆ.ಎಚ್., ವಿನತಾ ಕೆ., ನಾಗರಾಜ್ ಮದ್ದೋಡಿ, ರೇಖಾ ಸುದೇಶ್ ರಾವ್, ಚೈತ್ರ ಸಜಿತ್ ಕುಮಾರ್, ಶ್ರೀಕಾಂತ್ ಎಂ. (ಬಂಟ್ವಾಳ), ರಾಜೇಶ್ಚಂದ್ರ ಕೆ.ಪಿ., ಪೂಜಾ ಕೆ., ಶೋಭಾ ಶರತ್ ಹಾಗೂ ಸುಜಾತ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರದೀಪ್ ಬೇಕಲ್ ಸ್ವಾಗತಿಸಿದರು. ರೇಖಾ ಸುದೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರೆ, ಗಿರೀಶ್ ಪಿ.ಎಂ. ವಂದಿಸಿದರು.
ಸಮ್ಮೇಳನದಲ್ಲಿ ಕರ್ನಾಟಕ–ಕೇರಳ ಗಡಿಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗಾಗಿ ಕನ್ನಡ ಭವನ ಹಲವು ದಶಕಗಳಿಂದ ಸಲ್ಲಿಸುತ್ತಿರುವ ಸೇವೆಯನ್ನು ಗಣ್ಯರು ಶ್ಲಾಘಿಸಿದರು. ಕನ್ನಡದ ಅಭಿವೃದ್ದಿಗೆ ಗಡಿನಾಡಿನಲ್ಲಿನ ಇಂತಹ ಸಮ್ಮೇಳನಗಳು ಮತ್ತಷ್ಟು ಪ್ರೇರಣೆಯಾಗಲಿವೆ ಎಂದು ಅಭಿಪ್ರಾಯಪಟ್ಟರು.


