ಉಡುಪಿ: ಅಖಿಲ ಕರ್ನಾಟಕ ಸೌಂದರ್ಯ ತಜ್ಞೆಯರ ಸಂಘ ಉಡುಪಿ (ರಿ.) ಹಾಗೂ ನೇಚರ್ಸ್ ಪ್ರೊಫೆಷನಲ್ ಕಂಪನಿ ಸಹಯೋಗದಲ್ಲಿ ವೇದಾಸ್ ಬ್ಯೂಟಿ ಪಾರ್ಲರ್ನಲ್ಲಿ ಉಚಿತ ಕಾರ್ಯಾಗಾರ ನಡೆಯಿತು.


ಕಾರ್ಯಾಗಾರದಲ್ಲಿ 7 ಚಕ್ರ ಹೀಲಿಂಗ್, ಕ್ಯಾಂಡಲ್ ಮಸಾಜ್ ಹಾಗೂ ನೇಚರ್ಸ್ ಪ್ರೊಫೆಷನಲ್ ಕಂಪನಿಯ ಅಡ್ವಾನ್ಸ್ ಪ್ರಾಡಕ್ಟ್ಗಳ ಕುರಿತು ಮಾಹಿತಿ ಮತ್ತು ತರಬೇತಿ ನೀಡಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸುಪ್ರಭಾ ಶೆಟ್ಟಿ ಉಪ್ಪಳ, ಸ್ವಾತಿ ಪುತ್ತೂರು ಹಾಗೂ ನೇಚರ್ಸ್ ಪ್ರೊಫೆಷನಲ್ ಕಂಪನಿಯ ಚೈತ್ರಾ ಬೆಂಗಳೂರು ಭಾಗವಹಿಸಿದ್ದರು.


ವೇದಾಸ್ ಬ್ಯೂಟಿ ಪಾರ್ಲರ್ ಮಾಲಕಿ ವೇದ ಸುವರ್ಣ, ಪೂರ್ಣಿಮಾ ರತನ್ ಮಂಗಳೂರು, ಸಂಘದ ಜಿಲ್ಲಾಧ್ಯಕ್ಷೆ ಸುನಿತಾ ಗಣೇಶ್, ಕಾರ್ಯದರ್ಶಿ ಸಂಧ್ಯಾ ದಿನೇಶ್, ಕೋಶಾಧಿಕಾರಿ ಗೀತಾ ದಯಾನಂದ ಸೇರಿದಂತೆ ಸಂಘದ ಪದಾಧಿಕಾರಿಗಳು, ಫೌಂಡರ್ಸ್, ವಿವಿಧ ವಲಯಗಳ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಎಲ್ಲರ ಸಹಕಾರದೊಂದಿಗೆ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.




