ಉಪ್ಪಳದಲ್ಲಿ ‘ಸಮರಸ ಸಂಕಲ್ಪ ಅಭಿಯಾನ’ ರಾಜ್ಯ ಮಟ್ಟದ ಉದ್ಘಾಟನೆ ಆಗಸ್ಟ್‌ 5ಕ್ಕೆ

ಉಪ್ಪಳ: ಸಂತ ಶಿರೋಮಣಿ ಗುರು ರವಿದಾಸ್ ಮಹಾರಾಜರ 650ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ದೇಶವ್ಯಾಪಿಯಾಗಿ ನಡೆಯುತ್ತಿರುವ “ಸಮರಸ ಸಂಕಲ್ಪ ಅಭಿಯಾನ”ದ ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮ 2026ರ ಆಗಸ್ಟ್ 5ರಂದು (ಬುಧವಾರ) ಬೆಳಿಗ್ಗೆ 10.00 ಗಂಟೆಗೆ ಉಪ್ಪಳದ ಕೊಂಡೇವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಲಿದೆ.

ಜಾತಿ, ವರ್ಣ, ಭಾಷೆ ಹಾಗೂ ವೃತ್ತಿಯ ಹೆಸರಿನಲ್ಲಿ ನಡೆಯುವ ಭೇದಭಾವವನ್ನು ವಿರೋಧಿಸಿ, “ಎಲ್ಲಾ ಮನುಷ್ಯರೂ ಸಮಾನರು” ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕ ಜಗತ್ತಿಗೆ ಸಾರಿದ ಮಹಾನ್ ಭಕ್ತಿ ಸಂತ ಮತ್ತು ಸಾಮಾಜಿಕ ಸುಧಾರಕರಾಗಿದ್ದರು ಗುರು ರವಿದಾಸ್ ಮಹಾರಾಜರು. ಪ್ರೀತಿ, ಸಮಾನತೆ, ಸೇವೆ ಹಾಗೂ ಸಹೋದರತ್ವದ ಮೌಲ್ಯಗಳ ಮೇಲೆ ಆಧಾರಿತ ಸಮಾಜವೇ ಅವರ ಕನಸಾಗಿತ್ತು. ಸಾಮಾಜಿಕ ಸಮರಸತೆ ಮತ್ತು ಮಾನವೀಯ ಸೌಹಾರ್ದತೆಯ ಅವರ ಸಂದೇಶ ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ.

ಗುರು ರವಿದಾಸ್ ಮಹಾರಾಜರ 650ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ದೇಶವ್ಯಾಪಿಯಾಗಿ ನಡೆಯುತ್ತಿರುವ “ಸಮರಸ ಸಂಕಲ್ಪ ಅಭಿಯಾನ” 2026ರ ಜುಲೈ 29ರಂದು ಗುರು ಪೂರ್ಣಿಮೆಯ ದಿನ ಅವರ ಜನ್ಮಸ್ಥಳವಾದ ವಾರಾಣಸಿಯಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು. ಇದರ ಅಂಗವಾಗಿ ಕೇರಳ ರಾಜ್ಯ ಮಟ್ಟದ ಕಾರ್ಯಕ್ರಮವು 2026ರ ಆಗಸ್ಟ್ 5ರಂದು (ಬುಧವಾರ) ಬೆಳಿಗ್ಗೆ 10.00 ಗಂಟೆಗೆ ಉಪ್ಪಳದ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಲಿದೆ.


ಸಾಮಾಜಿಕ ಸಮರಸತೆ ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಈ ಮಹತ್ವದ ಕಾರ್ಯಕ್ರಮಕ್ಕೆ ಎಲ್ಲ ಸಜ್ಜನರನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ.

📍 ಸ್ಥಳ: ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂದೇವೂರು, ಉಪ್ಪಳ
ದಿನಾಂಕ: 2026 ಆಗಸ್ಟ್ 5, ಬುಧವಾರ
🕙 ಸಮಯ: ಬೆಳಿಗ್ಗೆ 10.00 ಗಂಟೆ

SHARE
Loading spinner

Leave a Reply

Your email address will not be published. Required fields are marked *

error: Content is protected !!