ಮಂಜೇಶ್ವರ: ಸಮಾಜ ಸೇವೆಯೇ ನನ್ನ ಗುರಿ ಮತ್ತು ನಾಡಿನ ಜನತೆಯ ಆರೋಗ್ಯವೇ ನನ್ನ ಧ್ಯೇಯ” ಎಂಬ ಉದಾತ್ತ ಉದ್ದೇಶದೊಂದಿಗೆ, ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜತ್ತೂರು ಅಂಡರ್ ಪಾಸ್ ಸಮೀಪದ ಕೆ.ಪಿ.ಎಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ಕ್ಲಿನಿಕ್ ವತಿಯಿಂದ ಭಾನುವಾರದಂದು ಆಯೋಜಿಸಲಾದ ಉಚಿತ ವೈದ್ಯಕೀಯ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು ಹಾಗೂ ಸ್ಥಳೀಯ ಸಾರ್ವಜನಿಕರ ಗಮನ ಸೆಳೆಯಿತು.

ಬೆಳಿಗ್ಗೆಯಿಂದಲೇ ಹರಿದುಬಂದ ಜನಸಂದಣಿ
ಶಿಬಿರದ ಆರಂಭದಿಂದಲೇ, ಅಂದರೆ ಬೆಳಿಗ್ಗೆಯಿಂದಲೇ ಕ್ಲಿನಿಕ್ನಲ್ಲಿ ರೋಗಿಗಳ ಹಾಗೂ ಸಾರ್ವಜನಿಕರ ಭಾರೀ ಜನಸಂದಣಿ ಕಂಡುಬಂತು. ಸುತ್ತಮುತ್ತಲಿನ ಗ್ರಾಮಗಳ ನೂರಾರು ಮಂದಿ ಆಗಮಿಸಿ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗಪಡಿಸಿಕೊಂಡರು. ವಿಶೇಷವಾಗಿ ಮಧುಮೇಹ ಮತ್ತು ರಕ್ತದೊತ್ತಡದ ತಪಾಸಣೆಯನ್ನು ನುರಿತ ವೈದ್ಯರಿಂದ ಮಾಡಿಸಿಕೊಳ್ಳಲು ಜನರು ಉತ್ಸುಕರಾಗಿದ್ದರು.
ಇದರೊಂದಿಗೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ, ಸೂಕ್ತ ಸಲಹೆ-ಸೂಚನೆಗಳನ್ನು ಪಡೆದರು.

ಯೇನಪೋಯ ಮೆಡಿಕಲ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಕುಂಜತ್ತೂರು ಆಯುಷ್ ಕ್ಲಿನಿಕ್ನ ಮುಖ್ಯಸ್ಥರಾದ ಡಾ. ಸುಝೀನಾ ಸಯ್ಯದ್ ಅವರು ಶಿಬಿರದಲ್ಲಿ ಪಾಲ್ಗೊಂಡಿದ್ದ ನೂರಾರು ರೋಗಿಗಳನ್ನು ತಪಾಸಣೆ ನಡೆಸಿ, ಆರೋಗ್ಯ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯೆ ಡಾ. ಸುಝೀನಾ ( ಬೈಟ್1) ಇಂದಿನ ಧಾವಂತದ ಜೀವನಶೈಲಿಯಲ್ಲಿ ಮಧುಮೇಹ ಮತ್ತು ರಕ್ತದೊತ್ತಡದಂತಹ ಕಾಯಿಲೆಗಳು ಮೌನವಾಗಿ ವೃದ್ಧಿಸುತ್ತಿವೆ. ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಜಾಗೃತಿ ಮೂಡಿಸುವುದು ಹಾಗೂ ಆರಂಭಿಕ ಹಂತದಲ್ಲೇ ಕಾಯಿಲೆಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸುವುದು ನಮ್ಮ ಕ್ಲಿನಿಕ್ನ ಮುಖ್ಯ ಗುರಿಯಾಗಿದೆ. ಸಾರ್ವಜನಿಕರು ಇಂತಹ ಶಿಬಿರಗಳ ಸದುಪಯೋಗಪಡಿಸಿಕೊಳ್ಳಬೇಕು” ಎಂದು ತಿಳಿಸಿದರು.

ಉಚಿತ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಪಡೆದ ಸ್ಥಳೀಯ ನಿವಾಸಿ ಹಾಗೂ ಸಂದರ್ಶಕರಾದ ಚಿನ್ನು ಅವರು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ, ( Byt 2) :
”ಗ್ರಾಮೀಣ ಪ್ರದೇಶದಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳು ಆಯೋಜನೆಗೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ. ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಇದು ದೊಡ್ಡ ಮಟ್ಟದ ನೆರವಾಗಿದೆ. ಆಯುಷ್ ಕ್ಲಿನಿಕ್ನ ಈ ಜನಪರ ಸೇವೆ ನಿರಂತರವಾಗಿ ಮುಂದುವರಿಯಲಿ” ಎಂದರು.
ಮತ್ತೊಬ್ಬ ಸಂದರ್ಶಕ ಅಬ್ದುಲ್ ಮಹೀದ್ ಅವರು ಮಾತನಾಡಿ, ( Byt 3)
”ನಮ್ಮೂರಿನಲ್ಲೇ ಇಂತಹ ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಉಚಿತ ತಪಾಸಣೆ ದೊರಕಿರುವುದು ನಮಗೆ ತುಂಬಾ ಖುಷಿ ತಂದಿದೆ. ಡಾಕ್ಟರ್ಗಳು ಬಹಳ ಕಾಳಜಿಯಿಂದ ನಮ್ಮ ಆರೋಗ್ಯವನ್ನು ತಪಾಸಣೆ ಮಾಡಿ, ಉತ್ತಮ ಸಲಹೆಗಳನ್ನು ನೀಡಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಬಿರದಲ್ಲಿ ಪಾಲ್ಗೊಂಡಿದ್ದ ಎಲ್ಲಾ ರೋಗಿಗಳಿಗೆ ಅಗತ್ಯವಿರುವ ಪ್ರಾಥಮಿಕ ಔಷಧೋಪಚಾರ ಹಾಗೂ ಆರೋಗ್ಯ ಜಾಗೃತಿ ಕರಪತ್ರಗಳನ್ನು ವಿತರಿಸಲಾಯಿತು. ಆಯುಷ್ ಕ್ಲಿನಿಕ್ನ ಈ ಸಮಾಜಮುಖಿ ಸೇವೆಯನ್ನು ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಊರಿನ ಪ್ರಮುಖರು ಪ್ರಶಂಸಿಸಿದ್ದಾರೆ.

