ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲು ಚಾರಣಕ್ಕೆ ಜೂ. 14 ರಿಂದ ಪ್ರವೇಶ ನಿರ್ಬಂಧಿಸಲಾಗಿದೆ.
ಮಳೆಯಿಂದ ಕಲ್ಲುಗಳು ಜಾರುವ ಹಿನ್ನೆಲೆಯಲ್ಲಿ ಚಾರಣ ಅಪಾಯಕಾರಿಯಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಚಾರಣಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಮಾಹಿತಿ ನೀಡಿದ್ದಾರೆ.
ಜೂ. 1 ರಿಂದ ಚಾರಣಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ನೂರಾರು ಮಂದಿ ಗಡಾಯಿಕಲ್ಲು ಚಾರಣ ನಡೆಸಿದ್ದರು.
ಇದೀಗ ಮತ್ತೆ ನಿರ್ಬಂಧ ಹೇರಿದ ಕಾರಣ ಚಾರಣಿಗರಿಗೆ ಭಾರೀ ನಿರಾಸೆಯಾಗಿದೆ. ಮಳೆ ಕಡಿಮೆಯಾದ ಬಳಿಕ ಮತ್ತೆ ಚಾರಣಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.