ಎಣ್ಮಕಜೆ ಪಂಚಾಯತ್ ಕಚೇರಿಗೆ ಎಲ್‌ಡಿಎಫ್ ಪ್ರತಿಭಟನಾ ಮೆರವಣಿಗೆ

ಎಣ್ಮಕಜೆ ಗ್ರಾಮ ಪಂಚಾಯಿತಿಗೆ ಯುಡಿಎಫ್ ಸರ್ಕಾರ ಅನುದಾನ ಕಡಿತಗೊಳಿಸಿರುವುದನ್ನು ಖಂಡಿಸಿ ಹಾಗೂ ಪಂಚಾಯತ್ ಆಡಳಿತ ಸಮಿತಿಯ ಭ್ರಷ್ಟಾಚಾರ ಮತ್ತು ದುರುಪಯೋಗದ ವಿರುದ್ಧ ಎಲ್‌ಡಿಎಫ್ ಎಣ್ಮಕಜೆ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪ್ರತಿಭಟನೆಯನ್ನು ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಕೆ. ಮಣಿಕಂಠನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ನಾಸಿರುದ್ದೀನ್ ಮಲಂಕರ, ಸಿಪಿಐ(ಎಂ) ಏರಿಯಾ ಕಮಿಟಿ ಸದಸ್ಯರಾದ ವಿನೋದ್ ಪೆರ್ಲ ಹಾಗೂ ಮಂಜುನಾಥ್ ಪಿ.ಕೆ., ಲೋಕಲ್ ಸೇಕ್ರೆಟರಿ ನಾರಾಯಣ ಎಸ್., ಸಿಪಿಐ ಲೋಕಲ್ ಸೇಕ್ರೆಟರಿ ಈಶ್ವರ ಪ್ರಸಾದ್, ಬ್ಲಾಕ್ ಕಾರ್ಯದರ್ಶಿ ವಿಶ್ವರಾಜ್ ಪೆರ್ಲ ಮತ್ತು ಸೌದಾಬಿ ಹನೀಫ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಪಂಚಾಯತ್ ಕಾರ್ಯದರ್ಶಿ ರಾಮಕೃಷ್ಣ ರೈ ಸ್ವಾಗತಿಸಿದರು. ಸಂಚಾಲಕ ನರಸಿಂಹ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!