ಸ್ಮಶಾನ ಅಭಿವೃದ್ಧಿಗೆ ಅಗ್ರಹಿಸಿ ವರ್ಕಾಡಿ ಪಂಚಾಯತ್ ಕಚೇರಿಗೆ ಬಿಜೆಪಿ ಮುತ್ತಿಗೆ

ವರ್ಕಾಡಿ : ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಏಕೈಕ ಹಿಂದೂ ರುದ್ರಭೂಮಿ ಯನ್ನು ಅಭಿವೃದ್ಧಿ ಮಾಡದೇ ಮತ್ತು ಶವ ಸಂಸ್ಕಾರಕ್ಕೆ ಅವಕಾಶ ಮಾಡಿ ಕೊಡದ ಕಾಂಗ್ರೆಸ್ ಮುಸ್ಲಿಂ ಲೀಗ್ ನೇತೃತ್ವದ ವರ್ಕಾಡಿ ಪಂಚಾಯತ್ ಆಡಳಿತ ಉದ್ದೇಶಪೂರ್ವಕ ಹಿಂದೂ ಗಳ ಮೂಲಭೂತ ಅವಕಾಶ ಗಳನ್ನು ಕಡೆಗಣಿಸುತಿದೆ.

ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಹಿಂದೂಗಳು ಮರಣ ಹೊಂದಿದರೆ ಪಕ್ಕದ ಕರ್ನಾಟಕ ದಲ್ಲಿ ಶವ ಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಯನ್ನು ವಿರೋಧಿಸಿ ಕೂಡಲೇ ಪಂಚಾಯತ್ ಆಡಳಿತ ಇರುವ ಸ್ಮಶಾನ ದ ಸಮಗ್ರ ಅಭಿವೃದ್ಧಿ ಗೆ ಅಗ್ರಹಿಸಿ ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಸೋಮವಾರ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿತು.

ಬಿಜೆಪಿ ರಾಜ್ಯ ಸಮಿತಿ ಸದಸ್ಯರು ಧಾರ್ಮಿಕ ಮುಂದಳು ಶ್ರೀ ರವಿಶತಂತ್ರಿ ಕುಂಟರು ಕಾರ್ಯಕ್ರಮ ಉದ್ಘಾಟಿಸಿ ಮುಸ್ಲಿಂ ಲೀಗ್ ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳ ಅಂತಿಮ ಕಾರ್ಯ ನಡೆಸಲು ತೊಂದರೆ ಮಾಡುವವರನ್ನು ಹಿಂದೂ ಸಮಾಜ ಉತ್ತರ ನೀಡಲಿದೆ ಎಂದು ಹೇಳಿದರು.

ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಒಂದು ಅಜೆಂಡಾ ಭಾಗವಾಗಿ ಹಿಂದುಗಳನ್ನು ಅವಾಗಣನೆ ಮಾಡುತ್ತಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಹಾ ಅಧ್ಯಕ್ಷೆ ಎಂ ಎಲ್ ಅಶ್ವಿನಿ.ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಮುಖಂಡರಾದ ಮಣಿಕಂಠ ರೈ, ಭಾಸ್ಕರ್ ಪೊಯ್ಯೇ, ದೂಮಪ್ಪ ಶೆಟ್ಟಿ, ರಕ್ಷನ್ ಅಡಕಲಾ, ಶ್ವೇತ ಪವಳ, ಹರಿಶ್ಚಂದ್ರ ಎಂ, ನೇತೃತ್ವದ ನೀಡಿದರು ಯತೀರಾಜ್ ಶೆಟ್ಟಿ ಸ್ವಾಗತಿಸಿ
ಸಂಪತ್ ವಂದಿಸಿದರು.ಮಜೀರ್ಪಲ್ಲ ದಿಂದ ಪಂಚಾಯತ್ ಕಚೇರಿಗೆ ಬೃಹತ್ ಜಾಥಾ ನಡೆಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!