ಮಂಜೇಶ್ವರ : ಕೇರಳದ ಪಂಚಾಯತ್ ನಗರ ಸಭೆಗಳಲ್ಲಿ ಹೊಸ ಆರ್ಥಿಕ ವರ್ಷದ ಅಭಿವೃದ್ಧಿ ಯೋಜನೆಗಳಿಗೆ ಕೊಡುವ 3000 ಕೋಟಿ ರೂಪಾಯಿ ಕೊಡದೆ ರಾಜ್ಯದಲ್ಲಿ ಆಡಳಿತ ನಡೆಸುವ ಯು ಡಿ ಎಫ್ ಸರಕಾರ ಜನರ ಮೂಲಭೂತ ಸೌಕರ್ಯಗಳಿಗೆ ಇಡುವ ಫಂಡ್ ಕೊಡದೆ ವಂಚಿಸುತ್ತಿದ್ದಾರೆ.


ಇದರಿಂದ ಹೊಸ ಪದ್ದತಿಗಳ ನಿರ್ವಹಣೆಗೆ ಮಾತ್ರವಲ್ಲದೆ ಹಲವಾರು ಕ್ಷೇಮ ಪಿಂಚಣಿ ಪದ್ಧತಿಗಳು ಬುಡಮೇಲುಗೊಂಡಿದೆ. ಕಾರುಣ್ಯ , ಕುಟುಂಬ ಆರೋಗ್ಯ ಕೇಂದ್ರಗಳಲ್ಲಿರುವ ಡಾಕ್ಟರ್ ಸೇವೆಗೆ, ಅಂಗನವಾಡಿ, ಬಡ್ಸ್ ಶಾಲೆಗಳ ಚಟುವಟಿಕೆಗಳಿಗೆ, ವಿಕಲಾಂಗ ಮಕ್ಕಳಿಗೆ ಕೊಡಬೇಕಾದ ಸ್ಕಾಲರ್ಶಿಪ್ ಬುಡಮೇಲುಗೊಂಡಿತು. ಮೇಂಟೆನೆನ್ಸ್ ಗ್ರಾಂಟ್ ಆದ 4000 ಕೋಟಿ ಮೊದಲ ಗಡು ಸಿಗಲೇ ಇಲ್ಲ.ಸ್ಥಳೀಯಾಡಳಿತ ಕೇಂದ್ರಗಳಿಗೆ ನೀಡಬೇಕಾದ ಹಣ ಕೊಡದೆ ಯುಡಿಎಫ್ ಸರಕಾರ ವಂಚಿಸಿದೆ.


ಮಾತ್ರವಲ್ಲದೆ ಲೈಫ್ ಪದ್ಧತಿ, ಕಳೆದ ಎಡರಂಗ ಸರಕಾರ ಮಹಿಳೆಯರಿಗೆ ಕೊಡುವ 1000 ರೂ ಪಿಂಚಣಿಯಾದ ಸ್ತ್ರೀ ಸುರಕ್ಷಾ ಪಿಂಚಣಿ ರದ್ದುಗೊಳಿಸಿದ್ದಕ್ಕೆ ಎದುರಾಗಿ ಎಡರಂಗ ಮಂಜೇಶ್ವರ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಮಾರ್ಚ್ ಧರಣಿ ನಡೆಸಲಾಯಿತು. ಧರಣಿಯನ್ನು ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಜಯರಾಮ ಬಲ್ಲಂಗುಡೆಲ್ ಉದ್ಘಾಟಿಸಿದರು. ಗಣೇಶ ಅಧ್ಯಕ್ಷತೆ ವಹಿಸಿದರು.ಕಮಲಾಕ್ಷ ಕೆ ಸ್ವಾಗತಿಸಿದರು.ಕರುಣಾಕರ ಶೆಟ್ಟಿ ಪ್ರಶಾಂತ್ ಕನಿಲ, ಅಶ್ರಫ್ ಕುಂಜತ್ತೂರು ಮೊದಲಾದವರು ಉಪಸ್ಥಿತರಿದ್ದರು.


