ಯೋಜನಾ ನಿಧಿ ಕಡಿತ ವಿರೋಧಿಸಿ ಮೀಂಜ ಪಂಚಾಯತ್ ಕಚೇರಿಗೆ ಮಾರ್ಚ್ ಎಡರಂಗದಿಂದ ಪ್ರತಿಭಟನಾ ಮೆರವಣಿಗೆ

ಸ್ಥಳೀಯಾಡಳಿತ ಸಂಸ್ಥೆಗಳ ಯೋಜನಾ ನಿಧಿ ಕಡಿತ, ಸ್ತ್ರೀ ಸುರಕ್ಷಾ ಪಿಂಚಣಿ ರದ್ದು, ಲೈಫ್ ಭವನ ಯೋಜನೆಯನ್ನು ದುರ್ಬಲಗೊಳಿಸಿರುವುದು ಹಾಗೂ ಉದ್ಯೋಗ ಖಾತರಿ ಯೋಜನೆಯ ಅನುದಾನ ಕಡಿತಗೊಳಿಸಿರುವುದನ್ನು ಖಂಡಿಸಿ ಮೀಂಜ ಪಂಚಾಯತ್ ಕಚೇರಿಗೆ ಎಡರಂಗದ ನೇತೃತ್ವದಲ್ಲಿ ಪ್ರತಿಭಟನಾ ಮಾರ್ಚ್ ನಡೆಯಿತು.ಪ್ರತಿಭಟನೆಯನ್ನು ಸಿಪಿಐ ರಾಜ್ಯ ಕೌನ್ಸಿಲ್ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಕಮಲಾಕ್ಷ ದೇರಂಬಳ ಅಧ್ಯಕ್ಷತೆ ವಹಿಸಿದ್ದರು.

ಸಿಪಿಐಎಂ ಏರಿಯಾ ಸಮಿತಿ ಸದಸ್ಯ ಹಾಗೂ ಪೈವಳಿಕೆ ಪಂಚಾಯತ್ ಸದಸ್ಯ ಹಾರಿಸ್ ಪೈವಳಿಕೆ, ಸಿಪಿಐ ಮುಖಂಡ ಮುಸ್ತಫಾ ಕಡಂಬಾರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಲೋಕೇಶ್ ಚಿನಾಲ, ರಾಮಚಂದ್ರ ಟಿ., ಪಂಚಾಯತ್ ಸದಸ್ಯೆ ಶರ್ಮಿಳಾ ಕುಳೂರ್ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಸಿಪಿಐ ಮುಖಂಡ ಜಯರಾಮ ಬಲ್ಲಂಗುಡೇಲು ಸ್ವಾಗತಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!