ದೈವರಾಧನೆಯಲ್ಲಿ ಗಗ್ಗರ, ತಿರಿ ಪ್ರಮುಖವಾದದ್ದು, ಇದನ್ನು ಕಟ್ಟುವ ಅಧಿಕಾರ ಇರುವುದು ದೈವಗಳಿಗೆ ಮಾತ್ರ
ಒಂದೊಂದು ದೈವಗಳಿಗೆ ಇಂತಿಷ್ಟು ದಂಡ್ ತಿರಿ ಬೇಕೆಂಬ ಕಟ್ಟಳೆ ಇದೆ
ಮೂಕಾಂಬಿ ಗುಳಿಗನಿಗೆ 16 ದಂಡ್, ಗುಳಿಗನಿಗೆ 3 ದಂಡ್, ಕೋಮರಾಯ ದೈವಕ್ಕೆ 9 ದಂಡ್, ಕೊರಗು ತನಿಯ ದೈವಕ್ಕೆ 2 ದಂಡ್,ಹೀಗೆ ನಿಯಮ ಇದೆ ಆದ್ರೆ ಈಗ ಕಾಲಕ್ಕೆ ಅನುಸರಿಸಿ ಹೋಗುತ್ತಾರೆ ಅಷ್ಟೇ……
ಪಂಜುರ್ಲಿ ದೈವಗಳಿಗೆ ತಿರಿಯದ್ದೇ “ಅಣಿ” ಆಗಬೇಕು,ತಿರಿಯ ಪರಿಮಳ ಕೇಳಿದ್ರೆ ಅಲ್ಲಿ ದೈವ ಶಕ್ತಿಯ ಭಯ ಭಕ್ತಿ ಹುಟ್ಟುತ್ತದೆ

ದೈವಗಳಿಗೆ ತಿರಿಯಲ್ಲಿ ಆಗುವ ವಸ್ತುಗಳು 🙏
1)ಅಣಿ
2)ಜಕ್ಕೆಲಣಿ (ಸೊಂಟಕ್ಕೆ ಕಟ್ಟುವುದು )
3)ಪುಂಡಾಯ (ಕೈಗೆ ಕಟ್ಟುವುದು)
4)ಉದುರಿ ಪುoಡಾಯ (ಸ್ತ್ರೀ ದೈವಗಳಿಗೆ ತಲೆಯ ಹಿಂದೆ ಕೂದಲ ತರ ಕಟ್ಟುವುದು)
5)ತಿಗಲೆ jauri (ಎದೆಗೆ ಕಟ್ಟುವುದು)
6)ಬಲಿಗಳು
ಕೋಲು ಬಲಿ, ನೆಲ ಬಲಿ, ಮುಕ್ಕಾಲಿ ಬಲಿ,
(ಕೋಳಿ ತಲೆ ಕೊಯ್ದು ನೆತ್ತರ ಆವಾರ ಕೊಡಲು )
7)ಮುಡಿಗಳು
ಕದ್ರೆ ಮುಡಿ, ಕೊಂಡೆ ಮುಡಿ,
ಗುಬ್ಯೆ (ಕುಪ್ಪೆ ಪಂಜುರ್ಲಿ ಮುಡಿ )
ಕುಕ್ಕೆ ಬಲಿ (ಕುಪ್ಪೆ ಪಂಜುರ್ಲಿಗೆ )

ಈ ತರ ಅನೇಕ ವಸ್ತುಗಳನ್ನು ದೈವಾರಾಧನೆಗೆ, ತಿರಿಯಲ್ಲಿ ತಯಾರಿಸಲಾಗುತ್ತದೆ
ಪ್ರಕೃತಿಯಲ್ಲಿ ದೊರೆಯುವ ವಸ್ತುಗಳು ಪ್ರಧಾನ
ಅದೇ ರೀತಿಯಲ್ಲಿ
ಗಗ್ಗರ ದೈವಗಳಿಗೆ ಮಾತ್ರ ಸೀಮಿತ, ಗಗ್ಗರದೊಚ್ಚಿ ಬಲಿನೇಮ, ಕೆಲವು ದೈವಗಳಿಗೆ ಇವೆ, ದೇವರಿಗೆ ಘಂಟೆ, ಜಾಗಟೆ ನಾದದ ಶಬ್ದ ಹೇಗೇನೋ ಹಾಗೆಯೇ ದೈವಾರಾಧನೆಯಲ್ಲಿ ಗಗ್ಗರ ಶಬ್ದ ಪ್ರಾಮುಖ್ಯವಾದದ್ದು🙏
(ಪನಿಯೆರೆ ಕಡಲ್ದ ನೀರ್ ದಾತ್ ಉಂಡು, ತೆರಿಪಾಯಿನಿ ಒಂಜಿ ಪನಿ ಬರ್ಸದಾತ್ 🙏
ನಂಬಿಕೆ ಒರಿಪಾಗ 🙏
❣️ಸ್ನೇಹಜೀವಿ❣️

✍️ಬರಹ :-ಉದಯಮಲ್ಲಿ, ಅಮ್ಮ್ಚಿ ಕೆರೆ, ಬೆದ್ರಡ್ಕ, ಸಿರಿಬಾಗಿಲು, ಕಾಸರಗೋಡು


