ದೇವನಿರುವನು ನಂಬಿಕೋ

ನಂಬಿ ಬದುಕಿರಿ ಎಂದಿಗೂ ದೇವನಿರುವನೆಂದು
ಬರಿದೆ ನಂಬದಿರಿ ಮಾಯದ ಮನುಜರನೆಂದು
ಹರಸಿ ಪೊರೆವನು ದೇವಾದಿ ದೇವ ನಂಬಿರಿಂದು
ಕೆಡಿಸುವನು ತಿಳಿದು ಜೀವನವ ಮನುಜನಿಂದು

ಭಗವಂತನ ಕೃಪೆ ಎಂದೂ ಜೊತೆಗಿದ್ದರೆ ನಿಮಗೆ
ದೊರೆಯುವುದು ಪರಮಾರ್ಥ ಬಾಳಿನ ಕೊನೆಗೆ
ಸಾಟಿ ಮನುಷ್ಯನು ಇರುವನೆನ್ನುವನು ಬಾಳಿಗೆ
ಸೇರಿ ಬದುಕುತ್ತಾ ತುಂಬಿಕೊಳ್ಳುವನು ಜೋಳಿಗೆ

ಸ್ವಕಾರ್ಯವೇ ಮೇಲಾಗಿದೆ ಇಂದು ಮನುಜಗೆ
ಪರರ ಆಡಿಕೊಳ್ಳುವುದೇ ಕಾಯಕವು ಮಾತಿಗೆ
ಸಕಲರನು ಕಾಪಿಡುವನು ಪರಮಾತ್ಮ ಅಡಿಗಡಿಗೆ
ದೇವರ ನಾಮದ ಬಲವೊಂದೇ ಸಾಕು ಬದುಕಿಗೆ

✍🏻✍🏻ಡಾ. ವಾಣಿಶ್ರೀ ಕಾಸರಗೋಡು
ಗಡಿನಾಡ ಕನ್ನಡತಿ

SHARE
Loading spinner

Leave a Reply

Your email address will not be published. Required fields are marked *

error: Content is protected !!