ಡಾ ll ಎನ್. ಎಸ್. ಎ. ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆ ನಿಟ್ಟೆಯಲ್ಲಿ ಮಾಧ್ಯಮ ಹಾಗೂ ಅಂತರ್ಜಾಲದ ಬಳಕೆ ಬಗ್ಗೆ ಜಾಗೃತಿ ಕಾರ್ಯಕ್ರಮ

NMAM IT ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಹಾಗೂ ಇಂಜಿನಿಯರಿಂಗ್ ವತಿಯಿಂದ
ಡಾ ll ಎನ್. ಎಸ್. ಎ. ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಮಾಧ್ಯಮ ಹಾಗೂ ಅಂತರ್ಜಾಲದ ಬಳಕೆಯ ಕುರಿತಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ನಿಟ್ಟೆ NMAMlT ಕಂಪ್ಯೂಟರ್ ಸೈನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ ll ಶಶಾಂಕ್ ಶೆಟ್ಟಿ
ಮಾತನಾಡಿ ಇಂದಿನ ದಿನಗಳಲ್ಲಿ ಮಧ್ಯಮಗಳು ಬಹಳ ಉಪಕ್ತ ಹಾಗೂ ಅಷ್ಟೇ ಅಪಾಯಕಾರಿ ಕೂಡಾ ಆಗಿರುವುದರಿಂದ ವಿದ್ಯಾರ್ಥಿಗಳು ಅತ್ಯಂತ ಜಾಗರೂಕರಾಗಿರಬೇಕು ಎಂದು ಕಿವಿಮಾತು ಹೇಳಿದರು ಹಾಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ NMAM IT ಯ (I S E) ಮಾಹಿತಿ ವಿಜ್ಞಾನ ಹಾಗೂ ಇಂಜಿನಿಯರಿಂಗ್ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿ ISE ವಿದ್ಯಾರ್ಥಿಗಳಾದ ಶ್ರಾವ್ಯ ಎನ್. ಭಟ್, ತಿಶಾಲ್ ಹೆಗ್ಡೆ, ಸನ್ಮತ್ ಶೆಟ್ಟಿ ಹಾಗೂ ತಂಡ ಹಾಗೂ NSS IT ವಿಭಾಗದ ಅಧ್ಯಕ್ಷ ಜ್ಞಾನದೀಪ್ ರೈ,ಉಪಾಧ್ಯಕ್ಷೆ ರಕ್ಷಿತಾ ಭಟ್, ಸಂಪನ್ಮೂಲವ್ಯಕ್ತಿಗಳಾಗಿ ಆಗಮಿಸಿ ಅಂತರ್ಜಾಲದ ಬಳಕೆ ಹಾಗೂ AI, ಮೊಬೈಲ್ ನಲ್ಲಿ, ರೀಲ್ಸ್ ನೋಡುವುದು, ವಾಟ್ಸಪ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆಯನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು, ಅನವಶ್ಯಕ ಮಾಹಿತಿ, ಲಿಂಕ್ ಗಳು, APK ಫೈಲ್ ಗಳನ್ನು ಓಪನ್ ಮಾಡದೇ ಇರವುದು, ಮತ್ತು ಹ್ಯಾಕರ್ಗಳ ಬಗ್ಗೆ ತಿಳಿಸಿ ರಸಪ್ರಶ್ನೆ ಗಳ ಮೂಲಕ ವಿಜೇತ ವಿದ್ಯಾರ್ಥಿಗಳಿಗೆ ನೀಡುವುದರ ಮೂಲಕ ಮಕ್ಕಳಲ್ಲಿ ಮಾಧ್ಯಮ ಮತ್ತು ಅಂತರ್ಜಾಲದ ಬಗ್ಗೆ ಜಾಗೃತಿ ಮೂಡಿಸಿದರು.


ಮಾಧ್ಯಮದ ಪ್ರತಿನಿಧಿಗಳಾದ ಉದಯವಾಣಿ ಪತ್ರಿಕೆಯ ಕಾರ್ಕಳ ವಿಭಾಗದ ಪತ್ರಕರ್ತ ಶ್ರೀ ಅವಿನ್ ಶೆಟ್ಟಿ ಮಾತನಾಡಿ ಪತ್ರಿಕೆಗಳ ಮಹತ್ವ ಹಾಗೂ ಪ್ರಚಲಿತ ಘಟನೆಗಳನ್ನು ಪ್ರಕಟಣೆ ಮಾಡುವ ಮಾಧ್ಯಮಗಳಲ್ಲಿ ಪತ್ರಿಕೆಗಳು ಮುಂಚೂಣಿಯಲ್ಲಿವೆ. ಆದ್ದರಿಂದ ವಿದ್ಯಾರ್ಥಿಯಾಗಿರುವಾಗಲೇ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಉದಯವಾಣಿ ಪತ್ರಿಕೆಯ ಪ್ರಸರಣ ವಿಭಾಗದ ಪ್ರತಿನಿಧಿ ಶ್ರೀ ಅಮೃತ್ ಶೆಟ್ಟಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ NMAM IT ತಾಂತ್ರಿಕ ಮಹಾವಿದ್ಯಾಲಯದ ಲೆಕ್ಕಾಧಿಕಾರಿ ಶೈಲಜಾ ವಿ ಶೆಟ್ಟಿ ಉಪಸ್ಥಿತರಿದ್ದರು.,
ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಹಾಗೂ ಅಧ್ಯಾಪಕ ವೃಂದ ಹಾಜರಿದ್ದರು.
ಶಾಲಾ ಇಂಟರಾಕ್ಟ್ ಕ್ಲಬ್ ನ ಸಂಚಾಲಕ ಹಾಗೂ ಹಿರಿಯ ಶಿಕ್ಷಕ ಚಂದ್ರ ನಾಯ್ಕ್ ಟಿ, ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಂಸತ್ತಿನ ನಾಯಕಿ ಕು ll ಯಶಸ್ವಿ. ವೈ. ಆಚಾರ್ಯ ಧನ್ಯವಾದ ಸಮರ್ಪಣೆ ಮಾಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!