ಯೂನಿಯನ್‌ಗಳ ಮತ್ತು ಅಧಿಕಾರಿಗಳ ನಡುವಿನ ಮಾತುಕತೆ ಯಶಸ್ವಿ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಬರ್ ಸೇವೆ ಪುನರಾರಂಭ

ಮಂಗಳೂರು; ಜೂ29: ಉಬರ್ ಕಂಪೆನಿಯ ಅನ್ಯಾಯದ ನೀತಿ ಹಾಗೂ ಚಾಲಕರ ಜೀವನೋಪಾಯಕ್ಕೆ ಧಕ್ಕೆ ಉಂಟುಮಾಡುತ್ತಿರುವ ಕ್ರಮಗಳನ್ನು ಖಂಡಿಸಿ ಮಂಗಳೂರು ಆನ್ ಲೈನ್ ಟ್ಯಾಕ್ಸಿ ಯೂನಿಯನ್ ಒಕ್ಕೂಟ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಪೆನಿಯೊಂದಿಗೆ ಹಲವು ಬೇಡಿಕೆಗಳನ್ನು ನೀಡಿ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು ಇದಕ್ಕೆ ಸ್ಪಂದಿಸಿದ ವಿಮಾನ ನಿಲ್ದಾನದ ಅಧಿಕಾರಿಗಳು ಇವತ್ತು ಯೂನಿಯನ್ ಗಳ ನಾಯಕರ ಸಭೆ ಕರೆಸಿ ಮಾತುಕತೆ ನಡೆಸಿ ತಮ್ಮ ಬೇಡಿಕೆಗಳನ್ನು ಪೂರೈಸುವುದಾಗಿ ಹೇಳಿದರು.

ಈ ಸಭೆಯಲ್ಲಿ ದ.ಕನ್ನಡ ಜಿಲ್ಲಾ ಆನ್ ಲೈನ್ ಟ್ಯಾಕ್ಸಿ ಒಕ್ಕೂಟದ ಅಧ್ಯಕ್ಷರಾದ ರಶೀದ್ ಬಜ್ಪೆ, ಉಪಾಧ್ಯಕ್ಷರಾದ ಮುನವ್ವರ್ ಕುತ್ತಾರ್, ಕಲೀಂ ಮದನಿ, ಪ್ರಧಾನ ಕಾರ್ಯದರ್ಶಿ ಅಝೀಝ್ ಮೊಗೊರು,ಜೊತೆ ಕಾರ್ಯದರ್ಶಿ ಫಾರೂಕ್, ಇಮ್ತಿಯಾಝ್ ಕುತ್ತಾರ್, ಕೋಶಾಧಿಕಾರಿ ನೌಶಾದ್ ಕಾವೂರು,
ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್,ಹಿಂದು ಟ್ಯಾಕ್ಸಿ ಯೂನಿಯನ್ ಇದರ ಕಾರ್ಯದರ್ಶಿ ಅನ್ನಪ್ಪ , ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್‌ ಗ್ರೂಪ್ ಅಧ್ಯಕ್ಷರಾದ ಜಗರಾಜ ರೈ, ಕರ್ನಾಟಕ ಚಾಲಕರ ಒಕ್ಕೂಟ ದ.ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯೇಂದ್ರ ಶೆಟ್ಟಿ, ದ.ಕನ್ನಡ ಜಿಲ್ಲಾ ಆನ್ ಲೈನ್ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘ ಅಧ್ಯಕ್ಷ ಸನತ್ ಕುಮಾರ್ , ದ.ಕನ್ನಡ ಆನ್ ಲೈನ್ ಟ್ಯಾಕ್ಸಿ ಒಕ್ಕೂಟ ಸದಸ್ಯರಾದ ಲತೀಶ್,ಸವಾದ್ ಮದ್ಯನಡ್ಕ ಉಪಸ್ಥಿತರಿದ್ದರು.

ಈ ಮಾತುಕತೆಯ ಫಲವಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಬರ್ ಸೇವೆಯನ್ನು ಪುನರಾರಂಭಿಸಲು ತೀರ್ಮಾನಿಸಲಾಗಿದ್ದು, ಇದರಿಂದ ನೂರಾರು ಚಾಲಕರಿಗೆ ಮತ್ತೆ ಉದ್ಯೋಗಾವಕಾಶ ದೊರಕಿದೆ. ಜೊತೆಗೆ ಪ್ರಯಾಣಿಕರಿಗೂ ಸುಗಮ ಸಾರಿಗೆ ಸೇವೆ ಲಭ್ಯವಾಗಲಿದೆ.

ಈ ಯಶಸ್ವಿ ಮಾತುಕತೆಗೆ ಸಹಕರಿಸಿದ ಸಂಬಂಧಪಟ್ಟ ಅಧಿಕಾರಿಗಳಿಗೆ, ವಿಮಾನ ನಿಲ್ದಾಣ ಆಡಳಿತಕ್ಕೆ ಹಾಗೂ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲಾ ಸಂಘಟನೆಗಳ ಮುಖಂಡರು, ಚಾಲಕರು ಹಾಗೂ ಸಾರ್ವಜನಿಕರಿಗೆ ಮಂಗಳೂರು ಆನ್‌ಲೈನ್ ಟ್ಯಾಕ್ಸಿ ಯೂನಿಯನ್ ಒಕ್ಕೂಟ ಕೃತಜ್ಞತೆ ಸಲ್ಲಿಸುತ್ತದೆ.

ಚಾಲಕರ ನ್ಯಾಯಸಮ್ಮತ ಹಕ್ಕುಗಳು ಹಾಗೂ ಜೀವನೋಪಾಯದ ರಕ್ಷಣೆಗೆ ಯೂನಿಯನ್ ಮುಂದೆಯೂ ಬದ್ಧವಾಗಿದ್ದು, ಯಾವುದೇ ಸಮಸ್ಯೆ ಎದುರಾದರೂ ಸಂಘಟಿತ ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಯೂನಿಯನ್ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!