ಮಂಜೇಶ್ವರ: ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಳ್ಳಾರ್ ನಲ್ಲಿದ್ದ ತನ್ನ ಕಟ್ಟಡಕ್ಕೆ ನಂಬರ್ ಪಡೆದುಕೊಳ್ಳಲು ವರ್ಗಾವಣೆಗೊಂಡ ಮಾಜಿ ಪಂಚಾಯತ್ ಕಾರ್ಯದರ್ಶಿಯ ಹೆಸರನ್ನು ಬಳಸಿ ನಕಲಿ ಪ್ರಮಾಣಪತ್ರ ಹಾಗೂ ಹಣ ಪಾವತಿ ರಶೀದಿಯನ್ನು ಸೃಷ್ಟಿಸಿದ ಆರೋಪದ ಮೇಲೆ ಒಬ್ಬನ ವಿರುದ್ಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡ್ಯಮ್ಮೆ ಪೂಕಟ್ಟೆಯ ಫಾರೂಕ್ ಎಂಬಾತನೇ ಆರೋಪಿಯಾಗಿದ್ದು, ಕುಂಬಳೆಯಿಂದ ಕಳೆದ ಸೆಪ್ಟೆಂಬರ್ನಲ್ಲಿ ವರ್ಗಾವಣೆಗೊಂಡಿದ್ದ ಮಾಜಿ ಕಾರ್ಯದರ್ಶಿ ಸಿದ್ದಾರ್ಥನ್ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಜನವರಿ 14ರಂದು ಈ ಕೃತ್ಯ ನಡೆದಿದ್ದು, ನವೆಂಬರ್ 27ರ ದಿನಾಂಕದೊಂದಿಗೆ ರೆಗ್ಯುಲರೈಸೇಶನ್ ಆರ್ಡರ್, ಆಕ್ಯುಪೆನ್ಸಿ ಸರ್ಟಿಫಿಕೇಟ್ ಹಾಗೂ ನಕಲಿ ರಶೀದಿಗಳನ್ನು ಸಿದ್ಧಪಡಿಸಿ ಸಲ್ಲಿಸಲಾಗಿದೆ. ಈ ಅಕ್ರಮದಲ್ಲಿ ಇತರರ ಕೈವಾಡವಿರುವ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

