ಕಾಸರಗೋಡು: ಆಷಾಡ ಮಾಸದಲ್ಲಿ ಪ್ರತಿವರ್ಷದಂತೆ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ನೇತೃತ್ವದಲ್ಲಿ ರಾಮಾಯಣ ಸತ್ಸಂಗ ಕಾರ್ಯಕ್ರಮ ಕಾಸರಗೋಡು ಹೃದಯ ಭಾಗದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರಗಿತು. ಹಿರಿಯ ವೈದ್ಯ ಧಾರ್ಮಿಕ ಮುಂದಾಳು ಡಾ| ಅನಂತ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ವಿಎಚ್ ಪಿ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಗುಣಪಾಲ ಅಮೈ ಉಪಸ್ಥಿತರಿದ್ದರು. ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕರಾದ ಡಾ| ವಾಮನ್ ರಾವ್ ಬೇಕಲ್, ವಿಶ್ವ ಹಿಮದೂ ಪರಿಷತ್ ಕಣ್ಣೂರು ವಿಭಾಗದ ಪ್ರಮುಖ್ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ಶುಭಹಾರೈಸಿ ಮಾತಾಡಿದರು. ವಿಎಚ್‌ಪಿ ಕಾಸರಗೋಡು ಪ್ರಖಂಡ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ ಸ್ವಾಗತ ಹಾಗೂ ಧನ್ಯವಾದ ನೀಡಿದರು, ಲಕ್ಷ್ಮೀಕಾಂತ ನೆಲ್ಲಿಕುಂಜೆ ಕಾರ್ಯಕ್ರಮ ನಿರೂಪಿಸಿದರು. ಕೆ.ಎನ್.ರಾಮಕೃಷ್ಣ ಹೊಳ್ಳ ಕಿಶೋರ್ ಎಸ್.ವಿ.ಟಿ. ವಸಂತ್ ಕೆರೆಮನೆ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದರು. ವಿದುಷಿ ವೈಭವಿ ಕುಂಬ್ಳೆ ಅವರಿಂದ ಸೀತಾರಾಮ ಕಲ್ಯಾಣ ಹರಿಕಥಾ ಸತ್ಸಂಗ ನಡೆಯಿತು.


