ದೈವಾರಾಧನೆ🙏

ವಿಷಯ:-ಅರ್ಧಲ

ದೈವಾರಾಧನೆಯಲ್ಲಿ ಅರ್ಧಲ ಅತೀ ಪ್ರಾಮುಖ್ಯವಾದುದು. ರಾಜOದೈವಗಳಿಗೆ,ಪಂಜುರ್ಲಿ, ಗೆ ಹಾಗೂ ಕೆಲವು ದೈವಗಳಿಗೆ ಹಳದಿ ಬಣ್ಣದ ಅರ್ಧಲ ಮುಖ್ಯ, ಮೊದಲು ಅದನ್ನು ಮುಖಕ್ಕೆ ಹಚ್ಚಿ ನಂತರ ಬೇಕಾದ ಹಾಗೆ ಆಕಾರಗಳನ್ನು ಮಾಡುತ್ತಾರೆ.

ಮೊದಲಿನ ಕಾಲದಲ್ಲಿ ಅರ್ಧಲ ನೋಡಿ ಯಾವ ದೈವ ಎಂದು ಹೇಳಲಾಗ ಬಹುದಿತ್ತು.

ಈಗ ಅರ್ಧಲದ ಬದಲು, ಹಲವು ರೀತಿಯ ಬಣ್ಣಗಳನ್ನು ಬಳಸುತ್ತಾರೆ. ಗುಳಿಗ ದೈವಕ್ಕೆ ಕಪ್ಪು ಬಣ್ಣ ಮತ್ತು 1001 ಚುಕ್ಕಿ ಬೇಕು ಎಂಬುದು ವಾಡಿಕೆ.ಮುಖಾಂಬಿ ಗುಳಿಗ ದೈವಕ್ಕೆ ಮಲಗಿಸಿ ಅರ್ಧಲ ಹಚ್ಚಬೇಕು ಅದೂ ಮೊದಲ ಚುಕ್ಕಿ ದೈವ ನರ್ತಕನ ಹೆಂಡತಿ ಅಥವಾ ಅಮ್ಮ ಹಚ್ಚಬೇಕು ಎಂಬ ನಿಯಮ ಇದೆ.ಈಗ ಕಾಲ ಬದಲಾಗಿದೆ ಕಾಲಕ್ಕೆ ತಕ್ಕಂತೆ ಕೋಲ ಎಂಬ ಗಾದೆ ತರ ಆಗಿದೆ 😌

ಶಿವ ವಂಶ ದೈವಗಳಿಗೆ ಹಣೆಯಲ್ಲಿ ಕಣ್ಣು, ವಿಷ್ಣು ವಂಶ ದೈವಗಳಿಗೆ, ನಾಮ, ಪಂಜುರ್ಲಿ ಗೆ ದಾಡೆ,ಗುಳಿಗನಿಗೆ ತ್ರಿಶೂಲ, ಸ್ತ್ರೀ ದೈವಗಳಿಗೆ ದೊಡ್ಡ ಸೂರ್ಯ ಬೊಟ್ಟು ಈತರ ಚಿತ್ರ ಬಿಡಿಸಲಾಗುತ್ತದೆ.ದೈವವು ಅರ್ಧಲವನ್ನು ನಮ್ಮ ಹಣೆಗೆ ಬೊಟ್ಟು ಇಟ್ಟರೆ ದೈವಾಶಿರ್ವಾದ, ದೈವಬಲ ಸಿಗುತ್ತದೆ ಎಂಬ ನಂಬಿಕೆ.ಕೆಲವೊಂದು ಉಗ್ರದೈವಗಳಿಗೆ ಅರ್ಧಲ ಹಚ್ಚುವಾಗಲೇ,ಕೋಲ ಕಟ್ಟುವ ದೈವ ನರ್ತಕನಿಗೆ “ವಸಾಯ” ಆಗುತ್ತದೆ.ಈಗ ಹಲವು ಕಡೆ ಅರ್ಧಲ ಹೋಗಿ ಬಣ್ಣಗಾರಿಕೆ ಆಗಿದೆ, ಎಂಬುದು ಕಟು ಸತ್ಯ.

ದೈವ ಶಕ್ತಿ, ಅವತ್ತು, ಇವತ್ತು, ಯಾವತ್ತೂ ಒಂದೇ, ಆದ್ರೆ ಜನಗಳಾದ ನಾವುಗಳು ನಮ್ಮ ಅನೂಕೂಲಕ್ಕೆ ಬದಲಾಗುತ್ತಿದ್ದೇವೆ ಎಂಬುದು ವಿಪರ್ಯಾಸ.

“ಪನಿಯೆರೆ ಸಮುದ್ರದ ನೀರ್ದಾತ್ ಉಂಡು, ಪಂಡಿನಿ ಒಂಜಿ ಪನಿ ಬರ್ಸದಾತ್”

ನಂಬಿಕೆ ಒರಿಪಾಗ 🙏

ಬರಹ✍️ಉದಯಮಲ್ಲಿ, ಅಮ್ಮ್ಚಿ ಕೆರೆ, ಬೆದ್ರಡ್ಕ, ಸಿರಿಬಾಗಿಲು, ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!