ಮಂಗಳೂರು: ಆಟಿ ಅಮವಾಸ್ಯೆ ಪ್ರಯುಕ್ತ ಆ.೧೨ (ಬುಧವಾರ)ರಂದು ನಗರದ ಅಳಕೆ ಸ್ಯಾನ್ಪ್ಲೋ ಕಾಂಪ್ಲೆಕ್ಸ್ನಲ್ಲಿರುವ ಸುವರ್ಣ ಕ್ಲಿನಿಕ್, ಪ್ರಕೃತಿ ಆಯುರ್ವೇದ ಪಂಚಕರ್ಮ ಸೆಂಟರ್ನಲ್ಲಿ ಉಚಿತವಾಗಿ ಆಟಿ ಕಷಾಯ ವಿತರಿಸಲಾಯಿತು. ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದರು.

ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಚಾಲನೆ ನೀಡಿ, ತುಳುವರ ವಿಶಿಷ್ಟ ಆಟಿ ಆಚರಣೆ ಮತ್ತು ಆಟಿ ಕಷಾಯದ ಮಹತ್ವವನ್ನು ತಿಳಿಸಿದರು. ಹಿರಿರ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಶುಂ ಕೋರಿದರು.
ಸಂಸ್ಥೆಯ ಗುಲಾಬಿ ಸುವರ್ಣ, ಹರಿಪ್ರಸಾದ್ ಚಾಲಿಯಾನ್, ಯಶವಂತ ಅಮೀನ್, ಸರಿತಾ, ರವಿ ದೇವಾಡಿಗ ಮೊದಲಾದವರಿದ್ದರು.
ಸುವರ್ಣ ಕ್ಲಿನಿಕ್ನ ಡಾ.ಹರಿಪ್ರಸಾದ್ ಸುವರ್ಣ ಸ್ವಾಗತಿಸಿದರು.


