ಪಾವೂರು ಮಹಾತ್ಮಾ ಗಾಂಧಿ ಸರ್ಕಲ್‌ನಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಮಂಜೇಶ್ವರ: ಪಾವೂರು ಮಹಾತ್ಮಾ ಗಾಂಧಿ ಸರ್ಕಲ್‌ನಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಶೋಕ್ ಪಾವೂರು ಅವರು ಧ್ವಜಾರೋಹಣ ನೆರವೇರಿಸಿದರು. ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಾರ್ಕಾಡಿ ಗ್ರಾಮ ಪಂಚಾಯತ್ ಸದಸ್ಯ ಸಿದ್ದಿಕ್ ಪಾವೂರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಾವೂರಿನ ಮಾಜಿ ಪೋಸ್ಟ್‌ಮಾಸ್ಟರ್ ಥ್ಯಾಂಪಣ್ಣ ರೈ, ಮಹಮ್ಮದ್ ಕುಂಡಾಪು, ಹಾರಿಸ್ ಕುಂಡಾಪು, ಸುಧಾಕರ ಶೆಟ್ಟಿ ಪಾವೂರು, ಪಾವೂರು ಪೋಸ್ಟ್‌ಮಾಸ್ಟರ್ ಪ್ರಕಾಶ್ ಕಾಪು, ಆಸೀಫ್ ಪಾವೂರು, ತ್ರಿಶಾಂಕ್ ದಯಾನಂದ ಪಾವೂರು, ಭದ್ರುದ್ದಿನ್ ಪಾವೂರು, ತನಿಸ್ಕ ದಯಾನಂದ ಪಾವೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಥ್ಯಾಂಪಣ್ಣ ರೈ ಅವರು ಸ್ವಾಗತಿಸಿದರು. ಪ್ರಕಾಶ್ ಕಾಪು ಅವರು ವಂದಿಸಿದರು. ಸ್ಥಳೀಯರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಂದೇಶ ಸಾರಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!