ಚೆಮ್ನಾಡ್ ವನಿತಾ ಸರ್ವೀಸ್ ಸೊಸೈಟಿಯಲ್ಲಿ ನಕಲಿ ಚಿನ್ನದ ವಂಚನೆ; ಇಬ್ಬರ ವಿರುದ್ಧ ದೂರು

​ಕಾಸರಗೋಡು: ಕಳನಾಡಿನ ಚೆಮ್ನಾಡ್ ಪಂಚಾಯತ್ ವನಿತಾ ಸರ್ವೀಸ್ ಸೊಸೈಟಿಯಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಒಟ್ಟು 5.75 ಲಕ್ಷ ರೂಪಾಯಿ ಸಾಲ ಪಡೆದು ವಂಚನೆ ಎಸಗಿರುವ ಬಗ್ಗೆ ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

​ಚಂದ್ರಗಿರಿ ಕೀಯೂರು ಹೌಸ್‌ನ ತಾಜುದ್ದೀನ್ (47) ಹಾಗೂ ಚಾತಂಗೈ ಮಣಿಯರದ ಕೆ. ಸಂತೋಷ್ (39) ವಿರುದ್ಧ ಸೊಸೈಟಿ ಕಾರ್ಯದರ್ಶಿ ಎ. ಉಷಾ ಕುಮಾರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

​ಪ್ರಮುಖ ಆರೋಪಿ ತಾಜುದ್ದೀನ್ ನಕಲಿ ಚಿನ್ನ ನೀಡಿ 4.40 ಲಕ್ಷ ರೂ. ಮತ್ತು ಸಂತೋಷ್ 1.35 ಲಕ್ಷ ರೂ. ಸಾಲ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಮೇಲ್ಪರಂಬ ಎಸ್‌ಐ ಟಿ. ಅಖಿಲ್ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!