ತೃಕರಿಪುರದಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟ: ಮನೆಯ ಅಡುಗೆ ಕೋಣೆ ಸುಟ್ಟು ಭಸ್ಮ

​ಕಾಸರಗೋಡು: ತೃಕರಿಪುರ ಬೀರಿಚ್ಚೇರಿಯ ಕುಲೇರಿ ಎಂಬಲ್ಲಿ ಮನೆಯೊಂದರಲ್ಲಿ ಅಡುಗೆ ಸಿಲಿಂಡರ್ ಸ್ಪೋಟಗೊಂಡು ಅಪಾರ ಹಾನಿ ಸಂಭವಿಸಿದೆ. ಆದರೆ ಸಕಾಲದಲ್ಲಿ ಕುಟುಂಬದವರು ಹೊರಗೆ ಓಡಿದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ.

ಕೆ.ಪಿ. ನಿಸಾರ್ ಎಂಬವರ ಮನೆಯಲ್ಲಿ ಆಹಾರ ತಯಾರಿಸುವ ವೇಳೆ ಅನಿಲ ಸೋರಿಕೆಯಿಂದ ಈ ಅಫಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಮನೆಯೊಳಗೆ ಕೇವಲ ಎರಡು ತಿಂಗಳ ಕಂದಮ್ಮ ಸೇರಿದಂತೆ ನಾಲ್ವರು ಸದಸ್ಯರಿದ್ದರು. ಸ್ಫೋಟದ ಭೀಕರ ಶಬ್ದ ಕೇಳುತ್ತಿದ್ದಂತೆ ಎಚ್ಚೆತ್ತವರು ಮಗುವಿನೊಂದಿಗೆ ಕೂಡಲೇ ಹೊರಗೋಡಿ ಜೀವ ಉಳಿಸಿಕೊಂಡಿದ್ದಾರೆ.

​ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ತೃಕರಿಪುರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸ್ಪೋಟದ ತೀವ್ರತೆಗೆ ಎರಡಂತಸ್ತಿನ ಮನೆಯ ಅಡುಗೆ ಕೋಣೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಫ್ರಿಡ್ಜ್, ಮಿಕ್ಸಿ ಸೇರಿದಂತೆ ಅನೇಕ ಗೃಹೋಪಕರಣಗಳು ಬೆಂಕಿಗಾಹುತಿಯಾಗಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!