ಮಂಜೇಶ್ವರದಲ್ಲಿ ಕಾರು ಅಡ್ಡಗಟ್ಟಿ ಟಾಟಾ ಟಿಯಾಗೊ ಇವಿ ಅಪಹರಣ

ಮಂಜೇಶ್ವರ: ಕಾರನ್ನು ಅಡ್ಡಗಟ್ಟಿ ಚಾಲಕನನ್ನು ಬಲವಂತವಾಗಿ ಹೊರಗಿಳಿಸಿ, ಟಾಟಾ ಟಿಯಾಗೊ ಇಲೆಕ್ಟ್ರಿಕ್ ಕಾರನ್ನು ಅಪಹರಿಸಲಾಗಿದೆ.ಕುಂಬಳೆ ಪೂಕಟ್ಟೆ ನಿವಾಸಿ ಮೊಹಮ್ಮದ್ ಸಯ್ಯದ್ ಮುಸಮ್ಮಿಲ್ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

​ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ದೂರುಗಾರ ಚಲಾಯಿಸುತ್ತಿದ್ದ ಕಾರನ್ನು ಖಾದರ್ ಎಂಬಾತ ಹಿಂಬಾಲಿಸಿ ಸೀತಾಂಗೋಳಿಯಲ್ಲಿ ತಡೆದು ನಿಲ್ಲಿಸಿದ್ದಾನೆ. ನಂತರ ಚಾಲಕನನ್ನು ಕೆಳಗಿಳಿಸಿ ಕಾರನ್ನು ಕೊಂಡೊಯ್ದಿದ್ದಾನೆನ್ನಲಾಗಿದೆ.

​ಅಪಹರಣಗೊಂಡ ಕಾರು ಚಟ್ಟಂಚಾಲ್‌ಗೆ ತಲುಪಿದಾಗ ವಿದ್ಯುತ್ ಚಾರ್ಜ್ ಮುಗಿದುಹೋಗಿದೆ. ಪರಿಣಾಮವಾಗಿ ಕಾರು ಅಲ್ಲಿಯೇ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಕುಂಬಳೆ ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!