ಎಂಡಿಎಂಎ ಸಮೇತ ಬಂಧನ: ಯೂತ್ ಕಾಂಗ್ರೆಸ್ ಸದಸ್ಯತ್ವ ರದ್ದು

​ಕಾಸರಗೋಡು: ಕಾಲಿಕ್ಕಡವಿನಲ್ಲಿ ಎಂಡಿಎಂಎ ಡ್ರಗ್ಸ್ ಸಮೇತ ಸಿಕ್ಕಿಬಿದ್ದ ಪೆರುಂಬಾವೂರ್ ವಲಿಯಕುಳಂ ಯೂನಿಟ್ ಯೂತ್ ಕಾಂಗ್ರೆಸ್ ಸದಸ್ಯ ಮುಹಮ್ಮದ್ ಹುಸೈನ್‌ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ರದ್ದು ಗೊಳಿಸಲಾಗಿದೆ ಎಂದು ಎರ್ನಾಕುಳಂ ಜಿಲ್ಲಾಧ್ಯಕ್ಷ ಸಿಜೋ ಜೋಸೆಫ್ ತಿಳಿಸಿದ್ದಾರೆ.

​ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕರೊಂದಿಗೆ ಆರೋಪಿ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ವಿವಾದ ಸೃಷ್ಟಿಸಿದೆ.

ತಾನು ಮುಖ್ಯಮಂತ್ರಿಯ ಸೋಶಿಯಲ್ ಮೀಡಿಯಾ ಕೋ-ಆರ್ಡಿನೇಟರ್ ಎಂದು ಆರೋಪಿ ಬಿಂಬಿಸಿಕೊಂಡಿದ್ದನು. ಆದರೆ, ಆತನಿಗೆ ಯಾವುದೇ ಅಧಿಕೃತ ಜವಾಬ್ದಾರಿ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಮಾದಕ ವಸ್ತುಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಮುಂದುವರಿಸಲಿದೆ ಎಂದು ಶಾಸಕ ಮುಹಮ್ಮದ್ ಶಿಯಾಸ್ ತಿಳಿಸಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!