ಮಂಗಳೂರಿನಲ್ಲಿ ಮೊಳಗಿದ ದೇಶಭಕ್ತಿ ಘೋಷಣೆ: ಸಾವಿರಾರು ಜನರೊಂದಿಗೆ ಅದ್ದೂರಿ ತಿರಂಗಾ ಯಾತ್ರೆ

ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಭಕ್ತರ ವೇದಿಕೆ, ಮಂಗಳೂರು ದಕ್ಷಿಣ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನ ಬಳಿಯ ರಾಜಾಜಿ ಪಾರ್ಕ್ ನಿಂದ ಗೋವಿಂದ ಪೈ ನವಭಾರತ್ ಸರ್ಕಲ್‌ವರೆಗೆ ಹಮ್ಮಿಕೊಳ್ಳಲಾಗಿದ್ದ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ಜನರು ಬೃಹತ್ ರಾಷ್ಟ್ರಧ್ವಜವನ್ನು ಹಿಡಿದು ಸಾಗುತ್ತಾ, ದೇಶದ ಪರ ಘೋಷಣೆ ಹಾಕುತ್ತಾ ಸಂಭ್ರಮಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ಸ್ವಾತಂತ್ರ್ಯದ ಕದನ ಕಲಿಗಳ ತ್ಯಾಗದ ಫಲವಾಗಿ ಇಂದು ನಾವೆಲ್ಲರೂ ಈ ಸಂಭ್ರಮವನ್ನು ಅನುಭವಿಸುತ್ತಿದ್ದೇವೆ. ತಿರಂಗ ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಿದ್ದು ಸದಾ ಅದರೆಡೆಗೆ ಗೌರವವಿರಲಿ ಎಂದರು. ನಳಿನ್ ಕುಮಾರ್ ಕಟೀಲ್ ಮಾತನಾಡಿ ಯುವ ಪೀಳಿಗೆ ತಿರಂಗಾ ಯಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವುದು ರಾಷ್ಟ್ರದ ಉತ್ತಮ ಭವಿಷ್ಯಕ್ಕೆ ಹಿಡಿದ ಕೈಗನ್ನಡಿ ಎಂದರು.

ಪ್ರಮುಖರಾದ ಸತೀಶ್ ಕುಂಪಲ, ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಪೂರ್ಣಿಮಾ ಎಂ, ಸುಜಿತ್ ಪ್ರತಾಪ್, ಸಂಜಯ್ ಪ್ರಭು, ಸುಧೀರ್ ಶೆಟ್ಟಿ ಕಣ್ಣೂರು, ಮಂಜುಳಾ ರಾವ್, ವಿಕಾಸ್ ಪುತ್ತೂರು, ನಂದನ್ ಮಲ್ಯ, ಅಶ್ವಿತ್ ಕೊಟ್ಟಾರಿ, ಅರುಣ್ ಜಿ. ಶೇಟ್, ಮಹೇಶ್ ಜೋಗಿ, ಋತ್ವಿಕ್ ಕದ್ರಿ, ಸಚಿನ್ ರೈ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಮೋನಪ್ಪ ಭಂಡಾರಿ, ನಿಕಟಪೂರ್ವ ಪಾಲಿಕೆ ಸದಸ್ಯರು, ಅನೇಕ ಪ್ರಮುಖರು, ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!