ಭವ್ಯ ಭಾರತವನ್ನು ನಿರ್ಧರಿಸುವವರು ಯುವ ಸಮೂಹ ಆಗಿರಬೇಕು – ಅಬ್ದುಲ್ ಮಜೀದ್

ಮಂಗಳೂರು (ಆ.12): ಯಂಗ್ ಡೆಮಾಕ್ರಟ್ಸ್ ಮಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಸಂಘಟನಾ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕರ್ನಾಟಕ ರಾಜ್ಯ ಜಾಯಿಂಟ್ ಕನ್ವೀನರ್ ಮೂನಿಶ್ ಅಲಿ ಯವರ ಅಧ್ಯಕ್ಷತೆಯಲ್ಲಿ ಮಂಗಳೂರು ಪುರಭವನದಲ್ಲಿ ನಡೆಯಿತು.ಕರ್ನಾಟಕ ರಾಜ್ಯ ಜಾಯಿಂಟ್ ಕನ್ವೀನರ್ ಅಶರ್ ನಾಗುಂಡಿ ಕಾರ್ಯಕ್ರಮದ ಮೊದಲು ಧ್ವಜಾರೋಹಣ ನೆರೆವೇರಿಸಿದರು.

ಈ ಕಾರ್ಯಕ್ರಮದಲ್ಲಿ ಯಂಗ್ ಡೆಮಾಕ್ರಟ್ಸ್ ಮಂಗಳೂರು ಗ್ರಾಮಾಂತರ ಹಾಗೂ ನಗರ ಸಮಿತಿಗಳ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಘೋಷಿಸಲಾಯಿತು.

ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಕನ್ವೀನರ್ ಆಗಿ ನ್ಯಾಯವಾದಿ ಅಸ್ಮಾ ಬೆಳ್ತಂಗಡಿ, ಜಾಯಿಂಟ್ ಕನ್ವೀನರ್‌ಗಳಾಗಿ ತೌಸಿಫ್ ಕಕ್ಕಿಂಜೆ, ಶಾಕಿರ್ ರಹ್ಮಾನ್, ಭುವನೇಶ್ ಬಂಟ್ವಾಳ ಹಾಗೂ ಸಮಿತಿ ಸದಸ್ಯರಾಗಿ ಅಡ್ವೋಕೇಟ್ ಮುಫೀದಾ ಸಂಶುದ್ದೀನ್, ಮಂಜುನಾಥ್ ಸವಣೂರು, ಶಾಕಿರ್ ಪಾಂಡವರಕಲ್ಲು, ಶಝ್ಮಾ ಫಾತಿಮಾ, ತನ್ವೀರ್ ವಿಟ್ಲ, ಸುನಿತಾ ಪುಂಜಾಲಕಟ್ಟೆ, ಹಮೀದ್ ಪುತ್ತೂರು, ಹಮ್ದಾ ಮೆಲ್ಕಾರ್, ಝಾಹಿದ್ ಬೆಳ್ತಂಗಡಿ ಆಯ್ಕೆಯಾಗಿದ್ದಾರೆ.

ಮಂಗಳೂರು ನಗರ ಜಿಲ್ಲಾ ಸಮಿತಿ ಕನ್ವೀನರ್ ಆಗಿ ಮುಹಮ್ಮದ್ ಇರ್ಫಾನ್ ತುಂಬೆ, ಜಾಯಿಂಟ್ ಕನ್ವೀನರ್‌ಗಳಾಗಿ ಸುನೀತಾ ಸಾಲ್ಧಾನಾ, ಅಬ್ದುಲ್ ತನ್ವೀರ್ ಉಳ್ಳಾಲ ಹಾಗೂ ಸಮಿತಿ ಸದಸ್ಯರಾಗಿ ಡಾ. ಹಫ್ಫಾನ್ ಬಶೀರ್, ಯುವ ನ್ಯಾಯವಾದಿ ಮುಹಮ್ಮದ್ ಮುನ್ಝಿರ್, ಸುಝಾನಾ ರುಫೈದಾ, ಮುಈನಾ ಬಾನು ಜೋಕಟ್ಟೆ, ಫಾತಿಮಾ ಜಸ್ಸೀರಾ, ಹಮೀದ್ ಫರಂಗಿಪೇಟೆ, ಖಾಲಿದ್ ಶಹಝೀರ್, ಇಸ್ಮಾಯಿಲ್ ಅನ್ಸಾರ್ ಕುದ್ರೋಳಿ ಆಯ್ಕೆಯಾಗಿದ್ದಾರೆ.

ಸಮಾರಂಭದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮಾತನಾಡಿ, ಭವ್ಯ ಭಾರತವನ್ನು ನಿರ್ಧರಿಸುವವರು ಯುವ ಸಮೂಹ ಆಗಿರಬೇಕು. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಭಾರತ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.

ಎಸ್‌ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ, ದೇಶವನ್ನು ಬದಲಾಯಿಸುತ್ತೇವೆ ಎಂಬ ಪ್ರತಿಜ್ಞೆ ಮಾಡಿರುವ ಯುವ ನಾಯಕರನ್ನು ಈ ಸಮಿತಿಗೆ ಆಯ್ಕೆ ಮಾಡಲಾಗಿದೆ. ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಆಶಯಗಳನ್ನು ಮುಂದಿಟ್ಟುಕೊಂಡು ಯುವ ನಾಯಕರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಸಮಾಜದ ಎಲ್ಲಾ ವರ್ಗಗಳ ಹಕ್ಕು ಮತ್ತು ನ್ಯಾಯದ ಪರವಾಗಿ ಎಸ್‌ಡಿಪಿಐ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ SDPI ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ, SDPI ರಾಜ್ಯ ಉಪಾಧ್ಯಕ್ಷೆ ಶಾಹಿದ ತಸ್ನೀಮ್, ವಿಮೆನ್ ಇಂಡಿಯಾ ಮೂಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, SDPI ರಾಜ್ಯ ಸಮಿತಿ ಸದಸ್ಯೆ ಮಿಸ್ರಿಯಾ ಕಣ್ಣೂರ್, SDPI ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರ್, SDPI ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಶ್ರಫ್ ಅಡ್ಡೂರು, ಯಂಗ್ ಡೆಮಾಕ್ರಟ್ಸ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರುಗಳಾದ ಜಯಕುಮಾರ್ ಹಾದಿಗೆ , ಮುರ್ಶಿದ ಅಬೂಬಕ್ಕರ್, ಅಝರ್ ಚಿತ್ರದುರ್ಗ, ಇಫ್ರತ್ ಝಹೀಮಾ ಹಾಗೂ ಝಕೀಯ ಹನೀಫ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!