ತುಳು ಭಾಷೆಯ ಬೆಳವಣಿಗೆ, ಸಾಹಿತ್ಯಾಭಿರುಚಿಗಳ ಬಗೆಗೆ ತುಳುವರಾದ ನಾವು ಹೆಮ್ಮೆ ಪಡಬೇಕು. ತುಳು ರಾಜ್ಯ ಸ್ಥಾಪನೆಯಾಗುವಲ್ಲಿ ನಮ್ಮ ಪ್ರಯತ್ನ ನಿರಂತರವಾದುದು. ನಮ್ಮ ಮುಂದಿನ ಪೀಳಿಗೆಯನ್ನು ತುಳು ಭಾಷೆಯತ್ತ ಸೆಳೆಯುವಲ್ಲಿ ನಾವು ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದ್ದೇವೆ. ಇಂದು ಮೂರು ಛಾತ್ರರನ್ನು ವಿದ್ಯಾನಿಧಿಯೊಂದಿಗೆ ಅಭಿನಂದಿಸುತ್ತಿದ್ದೇವೆ. ತುಳು ಬೆಳೆ ಯಲಿ. ಭಾಷಾಭಿಮಾನ ವೃದ್ಧಿಸಲಿ” ಎಂದು ಕುಡ್ಲ ತುಳುಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ ವಿದ್ಯಾರ್ಥಿ ಗಳನ್ನು ಪುರಸ್ಕರಿಸುತ್ತಾಹೇಳಿದರು.

ಮುಖ್ಯ ಅತಿಥಿಯಾಗಿ ತುಳುನಾಡು ವಿವಿದೊದ್ದೇಶ ಬ್ಯಾಂಕ್ ನ ನಿರ್ದೇಶಕ ಕೆ.ರಾಘವೇಂದ್ರ ಭಟ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ರೊ. ಜೆ.ವಿ.ಶೆಟ್ಟಿ ಸ್ವಾಗತಿಸಿದರು. ಉಪಕಾರ್ಯದರ್ಶಿ ಕದ್ರಿ ನಾಗೇಶ ದೇವಾಡಿಗ ಪ್ರಾರ್ಥಿಸಿದರು. ಶೀಮತಿ ಕಾಮಾಕ್ಷಿ, ರಮೇಶ್ ಕುಲಾಲ್, ಬಾಯಾರು, ಭಾಸ್ಕರ ಕುಲಾಲ್ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಪ್ರೀತೇಶ್, ಸಾನಿಧ್ಯ.ಡಿ.ಪಿಯುಸಿಯಿಂದ, ಕು.ಶ್ರಾವ್ಯ ಎಸೆಸ್ಸೆಲ್ಸಿ ಯಿಂದ ಪ್ರತಿಭಾ ಪುರಸ್ಕಾರ ಪಡೆದರು. ಪ್ರ.ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿ, ಧನ್ಯವಾದವಿತ್ತರು.


