34ನೇ ನೆಕ್ಕಿಲಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಅಸಮರ್ಪಕ ತಾಜ್ಯ ನಿರ್ವಹಣೆಯ ಬಗ್ಗೆ ಪುತ್ತಿಲ ಪರಿವಾರದಿಂದ ತಾಜ್ಯ ಘಟಕ ಕ್ಕೆ ಭೇಟಿ ಹಾಗೂ ಸಮರ್ಪಕ ನಿರ್ವಹಿಸಲು ಮನವಿ

34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೊದಲಿನಂತೆ ಪ್ರತಿದಿನ ಕಸ ಸಂಗ್ರಹಣೆ ಹಾಗೂ ಡೈಪರ್‌ಗಳನ್ನು ಪ್ರತಿದಿನ ಸಂಗ್ರಹಿಸುವಂತೆ ಮತ್ತು ಶಾಂತಿನಗರ ದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಜ್ಯ ನಿರ್ವಹಣೆ ಘಟಕದಲ್ಲಿ ನಿರ್ವಹಣೆ ಸರಿಯಾಗಿ ನಿರ್ವಹಿಸದೆ ಗಬ್ಬು ವಾಸನೆ ಯಿಂದ ಸ್ಥಳೀಯ ನಿವಾಸಿಗಳಿಗೆ ಅರೋಗ್ಯ ಸಮಸ್ಯೆ ಉಂಟಾಗುವ ಸಂಭವ ಇರುವ ಕಾರಣ ಈ ಕೂಡಲೇ ಸಮರ್ಪಕ ನಿರ್ವಹಣೆ ಮಾಡಬೇಕು.

ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯರೊಂದಿಗೆ ಪಂಚಾಯತ್ ಎದುರು ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್(ರಿ )ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಸಂಘಟನ ಕಾರ್ಯದರ್ಶಿ ಗಳಾದ ಉಮೇಶ್ ಕೊಡಿಬೈಲ್, ಪ್ರಶಾಂತ್ ನೆಕ್ಕಿಲಾಡಿ ನಿರ್ದೇಶಕರಾದ ರಾಜು ಶೆಟ್ಟಿ, ರೂಪೇಶ್ ನಾಯ್ಕ್, ಮನೀಶ್ ಕುಲಾಲ್, ಸ್ಥಳೀಯರಾದ ರಾಜೇಶ್ ಶಾಂತಿನಗರ, ಪ್ರಸಾದ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!