ಲುಂಗಿವಾಲ’ ಹೇಳಿಕೆ ವಿವಾದ: ಕಾಂಗ್ರೆಸ್ ನಾಯಕರೂ ಬಿಜೆಪಿ ಸಂಸದರೂ ಮೂರ್ಖರು ಎಂದ ರಾಜೀವ್ ಚಂದ್ರಶೇಖರ್

ತಿರುವನಂತಪುರ: ರಾಜ್ಯಸಭೆಯಲ್ಲಿ ಸಿಪಿಐ(ಎಂ) ಸದಸ್ಯ ಡಾ. ಜಾನ್ ಬ್ರಿಟ್ಟಾಸ್ ವಿರುದ್ಧ ‘ಲುಂಗಿವಾಲ’ ಎಂಬ ಹೇಳಿಕೆ ನೀಡಿದ ಬಿಜೆಪಿ ಸಂಸದೆ ಸುಷ್ಮಿತಾ ದೇವ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ‘ಮೂರ್ಖ’ ಎಂದು ಟೀಕಿಸಿದ್ದಾರೆ.

ತಮ್ಮ ವಿರುದ್ಧವೂ ಈ ಹಿಂದೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ‘ಲುಂಗಿವಾಲ’ ಎಂಬ ಹೇಳಿಕೆ ನೀಡಿದ್ದರು. ಆ ಹೇಳಿಕೆ ನೀಡಿದ್ದ ಜೈರಾಮ್ ರಮೇಶ್ ಕೂಡ ಮೂರ್ಖರು ಎಂದು ರಾಜೀವ್ ಚಂದ್ರಶೇಖರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜೈರಾಮ್ ರಮೇಶ್ ಈ ಹೇಳಿಕೆ ನೀಡಿದ್ದರೂ ತಾವು ಅದಕ್ಕೆ ಪ್ರತಿಕ್ರಿಯಿಸಲು ಹೋಗಿರಲಿಲ್ಲ ಎಂದು ಅವರು ಹೇಳಿದರು. “ನಾನು ಲುಂಗಿ ಧರಿಸುತ್ತೇನೆ. ನನ್ನ ಕೆಲಸವನ್ನು ನಾನು ಮಾಡುತ್ತೇನೆ. ಅವರ ಅಭಿಪ್ರಾಯ ಅವರದ್ದೇ. ಆ ಹೇಳಿಕೆ ನೀಡಿದ ಜೈರಾಮ್ ರಮೇಶ್ ಮೂರ್ಖರು,” ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

“ನಾನು ಲುಂಗಿ ಧರಿಸುತ್ತೇನೆ ಎಂಬುದನ್ನು ವಿವರಿಸಬೇಕಾದರೆ ಬ್ರಿಟ್ಟಾಸ್ ಅವರೇ ಅದನ್ನು ವಿವರಿಸಲಿ. ಇದು ವರ್ಣಭೇದವಲ್ಲ. ಮೂರ್ಖತನ ” ಎಂದು ಅವರು ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!