ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ 104ನೇ ಯೋಜನೆ ಯಶಸ್ವಿ

ಮಂಜೇಶ್ವರ: ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ (ರಿ), ಮಂಜೇಶ್ವರ, ತನ್ನ 104ನೇ ಸೇವಾ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಮಂಜೇಶ್ವರ ತಾಲೂಕಿನ ಮೀಂಜ ಪಂಚಾಯಿತಿಯ ಚಿಗುರುಪಾದೆ ನಿವಾಸಿಯಾದ ಸಾವಿತ್ರಿ ಅವರು ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಪತಿಯನ್ನು ಕಳೆದುಕೊಂಡಿರುವ ಅವರು ಇಬ್ಬರು ಹೆಣ್ಣುಮಕ್ಕಳ ನೆರವಿನಿಂದ ಜೀವನ ಸಾಗಿಸುತ್ತಿದ್ದಾರೆ.

ಸಾವಿತ್ರಿ ಅವರ ಪರಿಸ್ಥಿತಿಯನ್ನು ಮನಗಂಡ ಸಂಸ್ಥೆಯ ಸದಸ್ಯರು ಒಗ್ಗೂಡಿಸಿ ಸಂಗ್ರಹಿಸಿದ ₹25,000 ಮೊತ್ತವನ್ನು ನ್ಯಾಯವಾದಿ ನವೀನ್ ರಾಜ್ ಅವರ ಮೂಲಕ ಫಲಾನುಭವಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಆಶಾ ಲೋಕೇಶ್ ಮಾಡ, ರಾಜು ಕನಿಲ, ಹಿತೇಶ್ ಪಾವೂರ್, ರೂಪೇಶ್ ಜೋಡುಕಲ್, ವಸಂತ್ ಬೋರ್ಕಳ, ಸುನೀಲ್ ಕೊಡ್ಡೆ, ಸುಕೇಶ್ ಬೆಜ್ಜ, ಕೃಷ್ಣ ಅಟ್ಟೆಗೋಳಿ, ಅಂಕಿತ್ ಪಾವೂರು ಹಾಗೂ ಪ್ರದೀಪ್ ಮೊರತ್ತನೆ ಉಪಸ್ಥಿತರಿದ್ದರು.

ಸೇವಾ ಕಾರ್ಯಕ್ಕೆ ಸಹಕಾರ ನೀಡಿ ಸಂಸ್ಥೆಯ ಮೇಲಿನ ನಂಬಿಕೆಯನ್ನು ಉಳಿಸಿಕೊಂಡಿರುವ ಎಲ್ಲಾ ಸದಸ್ಯರಿಗೆ ಸಂಸ್ಥೆಯ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು.ಸಂಕಷ್ಟದಲ್ಲಿರುವವರ ಕೈಹಿಡಿಯುವ ಸೇವಾ ಕಾರ್ಯವನ್ನು ಮುಂದುವರಿಸುವ ಸಂಕಲ್ಪದೊಂದಿಗೆ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ 104ನೇ ಯೋಜನೆಯೂ ಯಶಸ್ವಿಯಾಗಿ ಪೂರ್ಣಗೊಂಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!