ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ(ರಿ)ಕಾಸರಗೋಡು ವತಿಯಿಂದ ಸಾರ್ವಜನಿಕ ಗ್ರಂಥಾಲಯ ಪ್ರಾರಂಭ

ಕಾಸರಗೋಡು:- ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು, ಅಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ವ್ಯವಸ್ಥಿತ ಗ್ರಂಥಾಲಯ “ಶಿವದುರ್ಗಾ”ವನ್ನು ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ ಶ್ರೀ ಗಿರಿ ಸದನ ಚೂರಿಪ್ಪಳ್ಳ ನೆಲ್ಲಿಕಟ್ಟೆಯಲ್ಲಿ ಇಂದು ಶ್ರೀ ದಾಮೋದರ ಇವರು ಉದ್ಘಾಟಿಸಿದರು. ಮುಂದಿನ ದಿನಗಳಲ್ಲಿ ಒಂದು ಸುಸಜ್ಜಿತ ಗ್ರಂಥಾಲಯವಾಗಿ ಪರಿವರ್ತಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.


ಡಾ ವಾಣಿಶ್ರೀ ಕಾಸರಗೋಡು ಇವರು ಗ್ರಂಥಾಲಯವು ಕನ್ನಡ, ಮಲಯಾಳಂ, ತುಳು, ಇಂಗ್ಲಿಷ್, ಹಿಂದಿ ಹೀಗೆ ವಿವಿಧ ಭಾಷೆಗಳ ಪುಸ್ತಕಗಳನ್ನು ಒಳಗೊಂಡಿರುವಂತೆ ಕಾರ್ಯಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು. ಗ್ರಂಥಾಲಯವು ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು, ಸಾಹಿತ್ಯ ಅಭಿಮಾನಿಗಳು, ಚಿಕಿತ್ಸೆಗೆಂದು ಬರುವ ರೋಗಿಗಳು, ಹಿರಿಯ ನಾಗರಿಕರು, ಬಳಸಿಕೊಳ್ಳಲು ಅನುವು ಮಾಡಿಕೊಡಲಾಗುವುದು ಎಂದು ವಿವರಿಸಿದರು. ದೇಶ ಸುತ್ತು ಕೋಶ ಓದು ಎನ್ನುವ ನಾಣ್ನುಡಿಯಂತೆ ಒಂದು ಗ್ರಂಥಾಲಯವು ಊರಿನ ಜ್ಞಾನದ ಭಂಡಾರವಾಗುತ್ತದೆ. ಆ ಮೂಲಕ ಊರಿನ ಜನರನ್ನು ಸುಶಿಕ್ಷಿತರನ್ನಾಗಿ ಮಾಡಿ ಒಂದು ಸುಂದರ ಪ್ರಜ್ಞಾವಂತ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಮ್ಮ ಮಾತುಗಳಲ್ಲಿ ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುರೇಶ್ ಉಡುಪಿ ಇವರು ಮುಂದಿನ ವಿಧಗಳಲ್ಲಿ ದಾನಿಗಳಿಂದ ಹಾಗೂ ಸಂಘ ಸಂಸ್ಥೆಗಳಿಂದ ಸರ್ಕಾರದಿಂದ ವಿವಿಧ ಸಾಹಿತ್ಯ ಕ್ಷೇತ್ರಗಳ ಪುಸ್ತಕಗಳನ್ನು ಸಂಗ್ರಹಿಸಿ ಉತ್ತಮ ಗ್ರಂಥಾಲಯವಾಗಿ ಹೊರ ಹೊಮ್ಮುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಈಗಾಗಲೇ ಗೋಕರ್ಣದಿಂದ ಅಭಿಮಾನಿಗಳಾದ ಶ್ರೀರಾಮುಲು ಅವರ ಆಪ್ತರು, ಹೈಕೋರ್ಟ್ ವಕೀಲರು ಆಗಿರುವ ಶ್ರೀ ಅಜಿತ್ ಇವರು ಶ್ರೀ ರಾಮನಾಥ್ ಮತ್ತು ಶ್ರೀಮತಿ ಭಾಗ್ಯ ಇವರ ಮುಖಾಂತರ ನಮ್ಮ ಸಂಘದ ಕಾರ್ಯಕ್ಕೆ ಕೈ ಜೋಡಿಸಿದ್ದು 100ಕ್ಕೂ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಹೀಗೆ ಈ ಕಾರ್ಯದಲ್ಲಿ ತೊಡಗಿಕೊಳ್ಳಲು ದಾನಿಗಳು, ಸಾಹಿತಿಗಳು, ಪುಸ್ತಕ ಪ್ರಕಾಶಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಇದೇ ಸಂದರ್ಭದಲ್ಲಿ ನಮ್ಮ ಸಂಘ ಏಳಿಗೆ ಹಾಗೂ ಗ್ರಂಥಾಲಯದ ಶುಭಾರಂಭಕ್ಕೆ ಶ್ರೀ ಅಭಿಷೇಕ ಅನಂತ ಅಡಿ, ಪ್ರಧಾನ ಅರ್ಚಕರು ಶ್ರೀ ಮಹಾಬಲೇಶ್ವರ ದೇವಸ್ಥಾನ ಗೋಕರ್ಣ ಇವರು ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಸಾದವನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಿರುತ್ತಾರೆ. ಇವರಿಗೆ ಸಂಘದ ವತಿಯಿಂದ ವಿಶೇಷ ಧನ್ಯವಾದಗಳನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯರಾದ ಶ್ರೀ ದಾಮೋದರ. ಶ್ರೀ ರಾಜನ್. ಡಾ. ವೆಂಕಟ ಗಿರೀಶ್, ಅಚ್ಚುತ ಭಟ್.ಕರುಣಾಕರ, ಮನೋಜ್ ಕುಮಾರ್, ರವಿಚಂದ್ರ ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!