ಮಂಗಳೂರು: ಕೆಎಂಸಿ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಾಜಿ ಸೇವೆಗೆ 25 ವರ್ಷ ತುಂಬಿದ್ದು . ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಸಹಾನುಭೂತಿಯ ರೋಗಿಯ ಆರೈಕೆಯನ್ನು ಸೂಚಿಸುತ್ತಿದೆ . 2000ನೇ ವರ್ಷದಲ್ಲಿ ಆರಂಭವಾದ ಈ ಸೇವೆಯು ಸುಧಾರಿತ ಡೈಯಾಗ್ನೋಸ್ಟಿಕ್ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುತ್ತಾ ಬರುತ್ತಿದೆ ಎಂದು ಗ್ಯಾಸ್ಟ್ರೋ ಎಂಟರಾಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ಬಿ ವಿ ತಂತ್ರಿ ತಿಳಿಸಿದರು.
ಅವರು ಕೆಎಂಸಿ ಆಸ್ಪತ್ರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಕಳೆದ 25 ವರ್ಷಗಳಿಂದ ನಮ್ಮ ವಿಭಾಗವು ಇಆರ್‌ಸಿಪಿ (ERCP), ಮತ್ತು ಇಯುಎಸ್ (EUS) ನಂತಹ ಸುಧಾರಿತ ಎಂಡೊಸ್ಕೋಪಿಕ್ ಕಾರ್ಯವಿಧಾನಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ಇದು ಕಾಂಪ್ಲೆಕ್ಸ್ ಬಿಲಿಯರಿ ( complex biliary ) ಮತ್ತು ಪ್ಯಾನ್‌ಕ್ರಿಯಾಟಿಕ್ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಮಹತ್ವದ ಫಲಿತಾಂಶವನ್ನು ದಾಖಲಿಸಲು ನೆರವಾಗಿದೆ. ನಮ್ಮ ಆಸ್ಪತ್ರೆಗೆ ಬರುವ ರೋಗಿಗಳು ಉತ್ತಮ ಆರೈಕೆ ಪಡೆಯುವುದನ್ನು ತಂತ್ರಜ್ಞಾನವನ್ನು ಖಚಿತಪಡಿಸಿಕೊಳ್ಳಲು ನಾವು ಆಧುನಿಕ ನಿರಂತರವಾಗಿ ಅಳವಡಿಸಿಕೊಳ್ಳುತ್ತಿದ್ದೇವೆ” ಎಂದರು.
ಗ್ಯಾಸ್ಟ್ರೋ ಎಂಟರಾಲಾಜಿಸ್ಟ್ ಡಾ. ಸಂದೀಪ್ ಗೋಪಾಲ್ ಮಾತನಾಡಿ , ಮಕ್ಕಳು, ಯುವಜನತೆ ಹಾಗೂ ಮಹಿಳೆಯರಲ್ಲಿ ಐಬಿಡಿ ಎಂದು ಕರೆಯಲ್ಪಡುವ ಇನ್ ಪ್ಲಾಮೆಟರಿ ಬೌವಲ್ ಡಿಸೀಸ್ ( ಜೀರ್ಣಾಂಗದ ಕ್ಯಾನ್ಸರ್, ನಾನ್ ಆಲೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ ಮತ್ತು ಲಿವರ್ ಸಿರೊಸಿಸ್ ) ಸಮಸ್ಯೆ ಆತಂಕಕಾರಿ ಮಟ್ಟದಲ್ಲಿ ಏರಿಕೆ ಕಂಡುಬರುತ್ತಿದೆ. ಇವು ಸಾಮಾನ್ಯವಾಗಿ ಬೊಜ್ಜು ಮತ್ತು ಕಳಪೆ ಆಹಾರ ಪದ್ಧತಿಗೆ ಸಂಬಂಧಿಸಿದೆ ಎಂದರು .
ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ. ಉನ್ನಿಕೃಷ್ಣನ್ ಮಾತನಾಡಿ , ಕೆ ಎಂ ಸಿ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಾಜಿ ವಿಭಾಗವು ವರ್ಷಗಳ ಸಂಶೋಧನೆ, ಜೀರ್ಣಾಂಗ ಮತ್ತು ಲಿವರ್ ಆರೈಕೆ ಯಲ್ಲಿ ಹೊಸ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸುವ ಮೂಲಕ ಹಾಗೂ ಡಿಎನ್‌ಬಿ ಕಾರ್ಯಕ್ರಮದ ಮೂಲಕ ಹೊಸ ಪೀಳಿಗೆಯ ವೈದ್ಯರನ್ನು ಸಿದ್ಧಪಡಿಸಿ , ಇಲ್ಲಿಯವರೆಗೆ 27 ವೈದ್ಯರಿಗೆ ತರಬೇತಿ ನೀಡಿ ಸಮಾಜಕ್ಕೆ ಕೊಡುಗೆ ನೀಡಿದೆ ಎಂದರು .
ಸುದ್ದಿಗೋಷ್ಠಿಯಲ್ಲಿ ಕನ್ಸೆಲೈಂಟ್ ಗ್ಯಾಸ್ಟ್ರೋ ಎಂಟರಾಲಾಜಿಸ್ಟ್ ಡಾ ಅನುರಾಗ್ ಶೆಟ್ಟಿ , ಡಾ ಸುರೇಶ ಶೆಣೈ , ಪ್ರಾದೇಶಿಕ ಕಾರ್ಯ ನಿರ್ವಹಣಾ ಅಧಿಕಾರಿ ಸಾಘಿರ್ ಸಿದ್ದಿಕಿ ಉಪಸ್ಥಿತತರಿದ್ದರು .