‘ಆಪರೇಷನ್ ತೂಫಾನ್’ ಅಭಿಯಾನಕ್ಕೆ ಮಂಗಲ್ಪಾಡಿಯಲ್ಲಿ ಭರ್ಜರಿ ಬೆಂಬಲ

ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕೇರಳ ಯು.ಡಿ.ಎಫ್ ಸರ್ಕಾರದ ಗೃಹ ಸಚಿವರಾದ ಶ್ರೀ ರಮೇಶ್ ಚೆನ್ನಿತಲ ಅವರ ನೇತೃತ್ವದಲ್ಲಿ ಜಾರಿಗೆ ತರಲಾದ ‘ಆಪರೇಷನ್ ತೂಫಾನ್'(The Narco Hunt )ಮಾದಕವಸ್ತು ವಿರೋಧಿ ಅಭಿಯಾನಕ್ಕೆ ಬೆಂಬಲ ಸೂಚಿಸುತ್ತಾ, ಬಂದಿಯೋಡ್ ಎಲೈಟ್ ಕಾಂಪ್ಲೆಕ್ಸ್‌ನಲ್ಲಿ ಮಾದಕವಸ್ತು ವಿರೋಧಿ ಸಂಗಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಿ.ಸಿ.ಸಿ ಅಧ್ಯಕ್ಷ ಪಿ.ಕೆ. ಫೈಸಲ್ ರವರು ಮಾತನಾಡಿ ಮಾದಕ ಲಹರಿಯನ್ನು ಬೇರು ಸಮೇತ ಕಿತ್ತು ಹಾಕುವ ಆಪರೇಷನ್ ತೂಫಾನ್ ಎಂಬ ದೊಡ್ಡ ಹೋರಾಟಕ್ಕೆ ಗೃಹ ಸಚಿವರಾದ ಶ್ರೀ ರಮೇಶ್ ಚೆನ್ನಿತಲ ಅವರ ನೇತೃತ್ವದಲ್ಲಿ ಕೇರಳ ಯು ಡಿ ಎಫ್ ಸರಕಾರವು ಕಾರ್ಯಾಚರಣೆಗಿಳಿದಿದೆ.ಈ ಹೋರಾಟದಲ್ಲಿ ಎಲ್ಲರೂ ಒಟ್ಟಾಗಿ ಕೈ ಜೋಡಿಸಿ ಈ ನಾಡನ್ನು ಲಹರಿ ಎಂಬ ಮಹಾ ವಿಪತ್ತಿನಿಂದ ಮುಕ್ತಿಗೊಳಿಸಬೇಕೆಂದು ಕರೆ ನೀಡಿದರು.


ಮುಖ್ಯ ಪ್ರಭಾಷಣ ಮಾಡಿದ ಮಾಜಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ರಂಜಿತ್ ರವರು ಮಾದಕ ದ್ರವ್ಯದ ಕೆಡುಕುಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಮಾದಕ ವಸ್ತುವಿನಿಂದ ದೂರ ಇರುವಂತೆ ಯುವ ಜನತೆಗೆ ಹೇಳಿದರು. ಕರ್ನಾಟಕ ಪಿ.ಸಿ.ಸಿ ವಕ್ತಾರ ಎಂ.ಜಿ. ಹೆಗ್ಡೆ ಯವರು ಮಾತನಾಡಿ” ಮಂಗಲ್ಪಾಡಿ ಕಾಂಗ್ರೆಸ್‌ನ ಹಳೆಯ ತಲೆಮಾರು ಮತ್ತು ಹೊಸ ತಲೆಮಾರು ಒಂದಾಗಿ ನಿಂತಿದ್ದು, ಮಂಗಲ್ಪಾಡಿಯಲ್ಲಿ ಪಕ್ಷದ ಹಳೆಯ ವೈಭವವನ್ನು ನೆನಪಿಸಿತು ಅಂದರು.”

ಸಮಾಜದ ವಿವಿಧ ಕ್ಷೇತ್ರಗಳ ಸುಮಾರು 15 ಗಣ್ಯರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ರಾಜೇಶ್ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆದ ಮಾದಕವಸ್ತು ವಿರೋಧಿ ಸಂಗಮದಲ್ಲಿ ಫಾರೂಕ್ ಶಿರಿಯಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಿ ಸಿ ಸಿ ಪ್ರಧಾನ
ಕಾರ್ಯದರ್ಶಿಗಳಾದ ಎಂ.ಸಿ. ಪ್ರಭಾಕರನ್, ಜೆ.ಎಸ್. ಸೋಮಶೇಖರ ಶೇಣಿ (ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರು), ಡಿ.ಎಂ.ಕೆ. ಮುಹಮ್ಮದ್, ಮಾಜಿ ಮಂಡಲಾಧ್ಯಕ್ಷರಾದ ಸತ್ಯನ್ ಸಿ. ಉಪ್ಪಳ, ಬಾಬು ಬಂದಿಯೋಡ್ ಮಾತನಾಡಿದರು. ಸುಲಫ ಟೀಚರ್ ದಿನಾರ್ ನಗರ್ ಸ್ವಾಗತ ಕೋರಿದರು ಮತ್ತು ಓಮನಕುಟ್ಟನ್ ಧನ್ಯವಾದ ಅರ್ಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!