ಬ್ರಹ್ಮರಕೋಟ್ಲು ಟೋಲ್ ತೆರವಿಗೆ ಆಗ್ರಹ: ಎಸ್‌ಡಿಪಿಐ ನೇತೃತ್ವದಲ್ಲಿ ಡಿಸಿ ಕಚೇರಿ ಚಲೋ

ದಕ್ಷಿಣ ಕನ್ನಡ ಜಿಲ್ಲೆಯ ಬ್ರಹ್ಮರ ಕೊಟ್ಲು ಟೋಲ್ ಗೇಟ್ ಅವಧಿ ಮತ್ತು ನಿಯಮ ಮೀರಿ ಕಳೆದ 25 ವರ್ಷಗಳಿಂದ ಅವೈಜ್ಞಾನಿಕ ರಸ್ತೆಯಲ್ಲಿ ಟೂಲ್ ಸಂಗ್ರಹಿಸುತ್ತಿದೆ ಎಂದು ಆರೋಪಿಸಿ ಇದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಎಸ್ ಡಿ ಪಿ ಐ ಪಕ್ಷದ ನೇತೃತ್ವದಲ್ಲಿ ಇಂದು ಬ್ರಹ್ಮರ ಕೊಟ್ಲು ಟೋಲ್ ಗೇಟ್ ಬಳಿಯಿಂದ ಡಿ ಸಿ ಕಚೇರಿ ಚಲೋ ಜಾಥಾ ನಡೆಯಿತು.

ಈ ಪಾದಯಾತ್ರೆಯಲ್ಲಿ ಅನೇಕ ಮಂದಿ ಪಾಲ್ಗೊಂಡು ಪಡೀಲ್ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಈ ಪಾದಯಾತ್ರೆಯಲ್ಲಿ ಪ್ರತಿಭಟನಾಕಾರರು ಟೋಲ್ ತೆರವು ಮಾಡಬೇಕೆಂದು ಆಗ್ರಹಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎಸ್ ಡಿಪಿಐ ನಾಯಕರಾದ ರಿಯಾಝ್ ಫರಂಗಿಪೇಟೆ, ಅನ್ವರ್ ಸಾದಾತ್ ಬಜತ್ತೂರು, ಅಶ್ರಫ್ ಅಡ್ಡೂರು, ಅಲ್ಪಾನ್ಸೋ ಫ್ರಾಂಕೋ ಸೇರಿದಂತೆ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!