ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧವಿದ್ದರೂ, ತಮಿಳುನಾಡು, ಆಂಧ್ರಪ್ರದೇಶಗಳಿಂದ ಹೇರಳವಾಗಿ ಮೀನು ಮಂಗಳೂರಿಗೆ ಬರುತ್ತಿದೆ. ಕಮಿಷನ್ ಏಜೆಂಟರು ಹೊರ ರಾಜ್ಯಗಳ ವ್ಯಾಪಾರಿಗಳೊಂದಿಗೆ ವ್ಯವಹರಿಸಿ, ಪ್ರತಿದಿನ 40-50 ಲಾರಿಗಳಷ್ಟು ಮೀನು ತರಿಸುತ್ತಿದ್ದಾರೆ. ಆಗಸ್ಟ್ 1ರಿಂದ ಕರ್ನಾಟಕದಲ್ಲಿ ಮೀನುಗಾರಿಕೆ ಆರಂಭವಾಗಲಿದ್ದರೂ, ಹೊರ ರಾಜ್ಯಗಳಿಂದ ಮೀನು ಪೂರೈಕೆ ನಿರಂತರವಾಗಿ ಮುಂದುವರಿಯುತ್ತದೆ.
ಕರ್ನಾಟಕ ಕರಾವಳಿಯಲ್ಲಿ ಜೂನ್ ಮತ್ತು ಜುಲೈನಲ್ಲಿಯೇ ಮೀನುಗಾರಿಕೆ ನಿಷೇಧವಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಕರಾವಳಿ ಪ್ರದೇಶಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮೀನು ಬರುತ್ತಿದೆ.
ಮಂಗಳೂರು, ಮಲ್ಪೆ, ಕುಂದಾಪುರ, ಗಂಗೊಳ್ಳಿ, ಭಟ್ಕಳ, ಕುಮಟಾ, ಕಾರವಾರದಲ್ಲಿ 26 ಕಮಿಷನ್ ಏಜೆಂಟ್ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 40-50 ಲಾರಿಗಳ ಮೂಲಕ ಐದು ಸಾವಿರ ಬಾಕ್ಸ್ ಮೀನು ತರಲಾಗುತ್ತಿದೆ.
ತಮಿಳುನಾಡು, ಆಂಧ್ರಪ್ರದೇಶವಲ್ಲದೆ, ಕೇರಳದ ನಾಡದೋಣಿ ಮೀನು ಬರುತ್ತಿದೆ. ದೂರದ ಗುಜರಾತ್, ಒಡಿಶಾದಿಂದಲೂ ಮೀನು ತರಿಸಲಾಗುತ್ತಿದೆ. ಚೆನ್ನೈನಲ್ಲಿ ಜು.15-20ರ ಮಧ್ಯೆ ಯಥೇಚ್ಛ ಮೀನುಗಾರಿಕೆ ನಡೆದರೂ, ಈ ಬಾರಿ ತೂಫಾನ್ನಿಂದ ಮೀನು ಕಡಿಮೆ ಇದೆ.ಹೊರ ರಾಜ್ಯದ ತಾಜಾ ಮೀನನ್ನು ಐಸ್ ಹಾಕಿ ಪೂರೈಕೆ ಮಾಡುತ್ತಿದ್ದು, ಕೇರಳದಿಂದ ರಾತ್ರಿ ಹೊರಟು ಬೆಳಗ್ಗೆ ತಲುಪಿದರೆ, ತಮಿಳುನಾಡು, ಆಂಧ್ರಪ್ರದೇಶದಿಂದ ಒಂದು ದಿನ, ಒಡಿಶಾ, ಗುಜರಾತ್ನಿಂದ 1-2 ದಿನ ಬೇಕಾಗುತ್ತದೆ.
ಮೀನು ಹೊತ್ತು ಬರುವ ಲಾರಿಗಳು ಮುಂಜಾನೆ 5.30ರೊಳಗೆ ಮಂಗಳೂರು ಮೀನುಗಾರಿಕೆ ದಕ್ಕೆಯ ಗೇಟು ಪ್ರವೇಶಿಸಬೇಕು. ನಂತರ ಬಂದ ಲಾರಿಗಳಿಗೆ ಪ್ರವೇಶವಿಲ್ಲ. 9 ಗಂಟೆಯೊಳಗೆ ವ್ಯಾಪಾರ ಮುಗಿಯುತ್ತದೆ. ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಪಕ್ಕದ ಮಂಜೇಶ್ವರ, ಉಪ್ಪಳ, ಕುಂಬಳೆಯ ಮೀನು ವ್ಯಾಪಾರಿಗಳು, ಕಮಿಷನ್ ಏಜೆಂಟರಿಂದ ಮೀನು ವ್ಯಾಪಾರಿಗಳು ಮೀನನ್ನ ಖರೀದಿಸುತ್ತಾರೆತಾಜಾ ಮೀನುಗಳಿಗೆ ಹೆಚ್ಚಿನ ಬೇಡಿಕೆ ಇದ್ದು ವಿಶೇಷವಾಗಿ ಹೋಟೆಲ್ಗಳಿಂದ ಹೆಚ್ಚು ಬೇಡಿಕೆ ಹೆಚ್ಚು